ಎಐಎಡಿಎಂಕೆ ನೇತೃತ್ವದ ತಮಿಳುನಾಡು ಸರಕಾರದ ಬಿಕ್ಕಟ್ಟಿಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರವೇ ಕಾರಣ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಎಐಎಡಿಎಂಕೆ ಬಣಗಳ ವಿಲೀನಗೊಂಡ ಒಂದು ವಾರದ ನಂತರ ಸ್ಟಾಲಿನ್ ಹೇಳಿಕೆ ನೀಡಿ, ಗುರುವಾರದಂದು 11 ಗಂಟೆಗೆ ನಮ್ಮನ್ನು ಭೇಟಿ ಮಾಡಲು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಒಪ್ಪಿಕೊಂಡಿದ್ದಾರೆ. ಮೈತ್ರಿಪಕ್ಷಗಳೊಂದಿಗೆ ಅವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
"ರಾಷ್ಟ್ರಪತಿಯವರನ್ನು ಭೇಟಿಯಾದ ಬಳಿಕವೂ ಕೇಂದ್ರ ಸರಕಾರ ತಮಿಳುನಾಡು ಸರಕಾರದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಾನೂನಿನ ಮೊರೆಹೋಗುತ್ತೇವೆ ಎಂದು ಗುಡುಗಿದ್ದಾರೆ.
ಎಐಎಡಿಎಂಕೆ ವಿಲೀನದ ನಂತರ 19 ಮಂದಿ ಶಾಸಕರು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ (ಇಪಿಎಸ್) ಸರಕಾರದಿಂದ ತಮ್ಮ ಬೆಂಬಲವನ್ನು ಹಿಂಪಡೆದಿದ್ದರಿಂದ ಸರಕಾರ ಬಹುಮತದ ಕೊರತೆ ಎದುರಿಸುತ್ತಿದೆ.
ಬಂಡಾಯ ಶಾಸಕರು ದಿನಕರನ್ ಅವರ ನಿವಾಸದಲ್ಲಿ ಭೇಟಿಯಾಗಿ ಪಳನಿಸ್ವಾಮಿ ಬಣದ ಭಾಗವಾಗಿದ್ದ ಶಾಸಕರು ಕೂಡಾ, ದಿನಕರನ್‌ಗೆ ಬಹಿರಂಗವಾಗಿ ಬೆಂಬಲವನ್ನು ಘೋಷಿಸಬಹುದು ಎನ್ನುವ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಓ ಪನ್ನೀರ್‌ಸೆಲ್ವಂ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಹಣಕಾಸು, ವಸತಿ, ಗ್ರಾಮೀಣ ವಸತಿ, ವಸತಿ ಅಭಿವೃದ್ಧಿ, ಸ್ಲಂ ಕ್ಲಿಯರೆನ್ಸ್ ಬೋರ್ಡ್, ಟೌನ್ ಯೋಜನೆ, ನಗರಾಭಿವೃದ್ಧಿ, ಚೆನ್ನೈ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ ಮತ್ತು ವಸತಿ ನಿಯಂತ್ರಣ ಖಾತೆಗಳನ್ನು ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.