ನವದೆಹಲಿ: ನೋಟು ನಿಷೇಧ ದೇಶ ಕಂಡ ಅತ್ಯಂತ ದೊಡ್ಡ ಆರ್ಥಿಕ ದುರಂತ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
2016 ರ ನವೆಂಬರ್ 7 ರಂದು ಮಧ್ಯರಾತ್ರಿ ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ನೋಟು ನಿಷೇಧ ದೇಶ ಕಂಡ ಅತ್ಯಂತ ದೊಡ್ಡ ಆರ್ಥಿಕ ದುರಂತ. ನೋಟ್ ಬ್ಯಾನ್ ನಿಂದ ಅನೇಕ ಜನ ಆರ್ಥಿಕ ತೊಂದರೆಗೊಳಗಾದದ್ದನ್ನು ನೋಡಿದ್ದೇನೆ. ಪ್ರಧಾನಿ ಮೋದಿ ನಿರ್ಧಾರದಿಂದ ದೇಶದ ಜನ ಸಮಸ್ಯೆ ಎದುರಿಸುವಂತಾಗಿದೆ ಎಂದಿದ್ದಾರೆ.
ಇತ್ತ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ನ. 8 ರಂದು ಚಲಾವಣೆಯಲ್ಲಿರುವ ರೂ. 500 ಮತ್ತು ರೂ .1000 ನೋಟುಗಳನ್ನು ಕಾನೂನಾತ್ಮಕವಾಗಿ ನಿಷೇಧಿಸಿರುವ ದಿನವನ್ನು ದೇಶಾದ್ಯಂತ 'ಆ್ಯಂಟಿ ಬ್ಲ್ಯಾಕ್-ಮನಿ ಡೇ' ಎಂದು ಘೋಷಿಸಿದ್ದಾರೆ.