ನವದೆಹಲಿ: 16 ವರ್ಷದವರಿರಲಿ, 60 ವರ್ಷದವರಿರಲಿ, ಕೊರೋನಾ ಎಲ್ಲರನ್ನೂ ಬಿಡದಂತೆ ಕಾಡುತ್ತಿದೆ. ಹೀಗಿರುವಾಗ ವ್ಯಾಕ್ಸಿನ್ ನೀಡುವಿಕೆಗೆ ಮಾತ್ರ ವಯೋಮಿತಿ ಏಕೆ? ಹೀಗೆಂದು ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ.
ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ವ್ಯಾಕ್ಸಿನ್ ನೀಡುವುದಾಗಿ ಕೇಂದ್ರ ಘೋಷಿಸಿದ ಬೆನ್ನಲ್ಲೇ ಕೋರ್ಟ್ ಇಂತಹದ್ದೊಂದು ಪ್ರಶ್ನೆ ಮಾಡಿದೆ. ಕೊರೋನಾ ಎರಡನೇ ಅಲೆ ಗಂಭೀರವಾಗಿದೆ. ಹೀಗಾಗಿ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತೆ ಮಾಡಿ ಎಂದು ಸಲಹೆ ನೀಡಿದೆ.
ಭಾರೀ ಪ್ರಮಾಣದಲ್ಲಿ ಕೊರೋನಾ ವ್ಯಾಕ್ಸಿನ್ ವ್ಯರ್ಥವಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ದೆಹಲಿ ಕೋರ್ಟ್ ಈ ರೀತಿ ಹೇಳಿದೆ. ವ್ಯರ್ಥವಾಗುವ ಬದಲು ಅರ್ಹರಿಗೆ ಅದನ್ನು ನೀಡಿದರೆ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬಹುದು ಎಂದಿದೆ.