ದೆಹಲಿ: ನಿನ್ನೆ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ಸ್ಟೇಷನ್ ಬಳಿ ನಡೆದ ಕಾರು ಸ್ಪೋಟದ ಸಿಸಿಟಿವಿ ದೃಶ್ಯಾವಳಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೆಟ್ರೋ ಸ್ಟೇಷನ್ ಬಳಿ ನಿನ್ನೆ ಸಂಜೆ 6.50 ರ ಸುಮಾರಿಗೆ ಸ್ಪೋಟ ನಡೆದಿದೆ. ಸ್ಪೋಟಕಗಳನ್ನು ಹೊಂದಿದ್ದ ಐ20 ಕಾರನ್ನು ಸ್ಪೋಟಿಸಲಾಗಿದೆ. ಇದೊಂದು ಆತ್ಮಾಹುತಿ ಭಯೋತ್ಪಾದಕ ದಾಳಿ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸಾಕಷ್ಟು ಜನ ಆ ಪ್ರದೇಶದಲ್ಲಿ ಓಡಾಡುತ್ತಿದ್ದರು. ಇದ್ದಕ್ಕಿದ್ದಂತೆ ಕೆಲವೇ ಮೀಟರ್ ದೂರದಲ್ಲಿ ಭಾರೀ ಪ್ರಮಾಣದಲ್ಲಿ ಸ್ಪೋಟದ ಜೊತೆಗೆ ಬೆಂಕಿ ಕಾಣಿಸಿಕೊಂಡು ಸಹಜವಾಗಿ ಓಡಾಡುತ್ತಿದ್ದ ಜನ ಗಾಬರಿಯಾಗುವುದನ್ನು ನೋಡಬಹುದಾಗಿದೆ.
ಮಾರ್ಕೆಟ್ ಏರಿಯಾದ ಸಿಸಿಟಿವಿ ದೃಶ್ಯವೊಂದರಲ್ಲಿ ಸ್ಪೋಟದ ದೃಶ್ಯ ಸೆರೆಯಾಗಿದೆ. ಭಾರೀ ಶಬ್ಧದ ಜೊತೆಗೆ ಬೆಂಕಿಯ ಕೆನ್ನಾಲಗೆ ಭುಗಿಲೇಳುವುದು ಕಾಣಬಹುದಾಗಿದೆ.