ನವದೆಹಲಿ : ಆಸ್ತಿಗಾಗಿ ಲವರ್ ಜೊತೆ ಸೇರಿ ಯುವತಿಯೊಬ್ಬಳು ತನ್ನ ತಂದೆತಾಯಿಯನ್ನೇ ಅಮಾನವೀಯವಾಗಿ ಕೊಲೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ದಾವೆಂದರ್ ಕೌರ್ ತನ್ನ ತಂದೆತಾಯಿಯನ್ನೆ ಕೊಂದ ಪಾಪಿ ಮಗಳು. ಈಕೆ ತಂದೆ ತಾಯಿ ತನ್ನ ಹೆಸರಿಗೆ ಆಸ್ತಿ ಬರೆಯಲು ನಿರಾಕರಿಸಿದ್ದಕ್ಕೆ ಅವರಿಗೆ ಚಹಾದಲ್ಲಿ ನಿದ್ದೆ ಬರುವ ಮಾತ್ರೆ ಹಾಕಿ ಅವರು ಪ್ರಜ್ಞೆ ಕಳೆದುಕೊಂಡ ಬಳಿಕ ಲವರ್ ಫ್ರಿನ್ಸ್ ಸಹಾಯದಿಂದ ಕೊಲೆ ಮಾಡಿದ್ದಾಳೆ. ತದನಂತರ ಮೃತದೇಹವನ್ನ ಸೂಟ್ ಕೇಸ್ ನಲ್ಲಿ ಹಾಕಿ ಡ್ರೈನೇಜ್ ಗೆ ಎಸೆದಿದ್ದಾಳೆ.
ಈ ಎರಡು ಮೃತದೇಹಗಳು ಪೊಲೀಸರ ಕೈಗೆ ಸಿಕ್ಕ ಹಿನ್ನಲೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದಾಗ ಯುವತಿ ಹಾಗೂ ಆಕೆಯ ಲವರ್ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.