Publish Date: Wed, 26 Oct 2022 (07:21 IST)
Updated Date: Wed, 26 Oct 2022 (09:24 IST)
ಲಕ್ನೋ : ಅಯೋಧ್ಯೆಯಲ್ಲಿನ ಭವ್ಯವಾದ ರಾಮ ಮಂದಿರದಲ್ಲಿ ಭಕ್ತರ ದರ್ಶನವು 2024ರ ಜನವರಿಯಿಂದ ಪ್ರಾರಂಭವಾಗುತ್ತದೆ ಎಂದು ಅದರ ನಿರ್ಮಾಣದ ಮೇಲ್ವಿಚಾರಣೆಗಾಗಿ ಸ್ಥಾಪಿಸಲಾದ ಟ್ರಸ್ಟ್ನ ಪ್ರಮುಖ ಸದಸ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. 50ರಷ್ಟು ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಒಟ್ಟಾರೆ ಪ್ರಗತಿ ತೃಪ್ತಿಕರವಾಗಿದೆ.
ಮಕರ ಸಂಕ್ರಾಂತಿ ಹಬ್ಬದಂದು ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ 2024ರ ಜನವರಿಯಲ್ಲಿ ದೇವಾಲಯಗಳನ್ನು ಭಕ್ತರಿಗೆ ತೆರೆಯಲಾಗುವುದು ಎಂದು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದರು.