Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಯೋಗಿ ಆದಿತ್ಯನಾಥ್‌ಗೆ 125 ಕೆಜಿ ಭಾರ, 16 ಅಡಿ ಉದ್ದದ ಸಾಬೂನ್‌ ಕಳುಹಿಸಿದ ದಲಿತರು

ಸಿಎಂ ಯೋಗಿ ಆದಿತ್ಯನಾಥ್‌ಗೆ 125 ಕೆಜಿ ಭಾರ, 16 ಅಡಿ ಉದ್ದದ ಸಾಬೂನ್‌ ಕಳುಹಿಸಿದ ದಲಿತರು
ಅಹ್ಮದಾಬಾದ್ , ಶುಕ್ರವಾರ, 9 ಜೂನ್ 2017 (18:12 IST)
ಗುಜರಾತ್‌ನಲ್ಲಿ ಹೊಸದಾಗಿ ರೂಪುಗೊಂಡ ದಲಿತ ಸಂಘಟನೆಯೊಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ  125 ಕೆಜಿ ಭಾರ ಮತ್ತು 16 ಅಡಿ ಉದ್ದವಿರುವ ಸಾಬೂನನ್ನು ಉಡುಗೊರೆಯಾಗಿ ನೀಡಿ ಸೇಡು ತೀರಿಸಿಕೊಂಡಿದೆ.
 
ಕಳೆದ ಮೇ ತಿಂಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದತ್ಯನಾಥ್ ಖುಷಿನಗರ್ ಜಿಲ್ಲೆಯ ಮೇನ್‌ಪುರ್ ದೀನಾಪಟ್ಟಿ ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮುಶಾಹರ್ ದಲಿತ ಸಮುದಾಯದವರಿಗೆ ಸಾಬೂನ್‌ಗಳು, ಸುಗಂಧ ದೃವ್ಯ ಮತ್ತು ಶಾಂಪೂಗಳನ್ನು ನೀಡಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವಾಗ ಸಾಬೂನ್‌, ಶಾಂಪು ಬಳಸಿ ಸ್ಥಾನ ಮಾಡಿ ಶುಚಿಯಾಗಿರಬೇಕು ಎಂದು ಅಧಿಕಾರಿಗಳು ಆದೇಶ ನೀಡಿದ್ದರು. 
 
ಇದೀಗ, ದಲಿತರನ್ನು ಭೇಟಿ ಮಾಡುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್ 16 ಅಡಿ ಉದ್ದದ ಸಾಬೂನ್‌ನಲ್ಲಿ ಸ್ಥಾನ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ಉಡುಗೊರೆಯಾಗಿ ನೀಡಿದ್ದೇವೆ ಎಂದು ಡಾ. ಅಂಬೇಡ್ಕರ್ ವೆಚನ್ ಪ್ರತಿಭಂದ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
 
"ಯೋಗಿ ಆದಿತ್ಯನಾಥ್ ಅವರ ವರ್ತನೆ ಮನುವಾಡಿ (ಜಾತಿವಾದಿ) ವಿಧಾನವನ್ನು ಸೂಚಿಸುತ್ತದೆ. ಅವರು ಈ ಕಲ್ಮಶಗಳಿಂದ ಸ್ವತಃ ಶುದ್ಧೀಕರಿಸಿಕೊಳ್ಳುವ ಅಗತ್ಯವಿದೆ ಎಂದು ಸಂಘಟನೆಯ ಸದಸ್ಯರಾದ ಕಿರೀತ್ ರಾಥೋಡ್ ಮತ್ತು ಕಾಂತಿಲಾಲ್ ಪರ್ಮಾರ್ ವ್ಯಂಗ್ಯವಾಡಿದ್ದಾರೆ.
 
ಯೋಗಿ ಆದಿತ್ಯನಾಥ್‌ಗೆ ಕಳುಹಿಸಿದ ಸಾಬೂನಿನ ಮೌಲ್ಯ 3200 ರೂಪಾಯಿಗಳಾಗಿದ್ದು, ಅದರ ಮೇಲೆ ಗೌತಮ ಬುದ್ಧ ಭಾವಚಿತ್ರ ಅಂಟಿಸಲಾಗಿದೆ.
 
ಏತನ್ಮಧ್ಯೆ, ಸಮಿತಿ ಸದಸ್ಯ ಮಾರ್ಟಿನ್ ಮಾಕ್ವಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತೀಯ ಸಮಾಜದಲ್ಲಿ ಜಾತಿ ತತ್ವವನ್ನು ವಿರೋಧಿಸುವ ದೃಷ್ಟಿಯಿಂದ ಬೌದ್ಧಮತವನ್ನು ಅನುಸರಿಸಿದ ಅಂಬೇಡ್ಕರ್ ಅವರ 125 ನೇ ಜನ್ಮದಿನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್‌ಗೆ ಉಡುಗೊರೆ ಕೊಡುವ ಬಗ್ಗೆ ಆಲೋಚನೆ ಬಂದಿದೆ ಎಂದು ತಿಳಿಸಿದ್ದಾರೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂಧಿ ಎಂದರೇನು? ಸದನದಲ್ಲಿ ಸಂಧಿ ಪಾಠ ಹೇಳಿದ ಸಿಎಂ