ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಕೆಲ ಹೊತ್ತು ಸಂಧಿಗಳ ಬಗ್ಗೆ ಶಾಸಕರಿಗೆ ಪ್ರಶ್ನೆಗಳನ್ನು ಕೇಳುತ್ತಾ, ವಿವರಣೆ ನೀಡುತ್ತಾ, ಕೆಲ ಉದಾಹರಣೆಗಳನ್ನು ನೀಡಿ ಸದನದಲ್ಲಿ ಕನ್ನಡ ವ್ಯಾಕರಣದ ಬಗ್ಗೆ ವಿವರಿಸಿದ್ದು ವಿಶೇಷವಾಗಿತ್ತು.
ಬಿಜೆಪಿ ಶಾಸಕ ನಾರಾಯಣ ಸ್ವಾಮಿ 10 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಅಕ್ರಮವಾಗಿ ತೆರೆಯಲಾಗಿದೆ ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಸಿಎಂ ಸಿದ್ದರಾಮಯ್ಯ 56 ಲಕ್ಷ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದುತ್ತಿಲ್ಲವಾ ? ನಿನಗೆ ಮಕ್ಕಳಿದ್ದಾರಾ? ಅವರು ಎಲ್ಲಿ ಓದುತ್ತಿದ್ದಾರೆ' ಎಂದು ಪ್ರಶ್ನಿಸಿದರು. ಅದು ಬಿಡಿ ಇಂದು ಹಲವರಿಗೆ ವ್ಯಾಕರಣ ಅಂದ್ರೆ ಏನು ಅಂಥ ಗೊತ್ತಿಲ್ಲ. ಸಂಧಿ ಎಂದರೇನು ಅಂಥಾ ಗೊತ್ತಿಲ್ಲ. ನಮ್ಮ ಭಾಷೆಯನ್ನೇ ಮರೆಯುವ ಕಾಲ ಬಂದಿದೆ ಎಂದು ಸಂಧಿ ಎಂದರೇನು ಸಮಾಸ ಎಂದರೇನು? ಎಂದು ಶಾಸಕರನ್ನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಿದರು.
ನನ್ನ ಜೊತೆ 6 ನೇ ತರಗತಿಯಲ್ಲಿ ಪುಟ್ಟಸ್ವಾಮಿ ಎಂಬ ಸಹಪಾಠಿ ಇದ್ದ. ಆಗೆಲ್ಲಾ ಮೌಖೀಕ ಪರೀಕ್ಷೆ ಇತ್ತು. ಮೇಷ್ಟು ಎಲ್ಲರಿಗೂ ಕರೆದು ಪ್ರಶ್ನೆ ಕೇಳಿದರು. ಸಂಧಿ ಎಂದರೇನು ಎಂದು ಮೇಷ್ಟ್ರು ಕೇಳಿದ್ದಕ್ಕೆ ಪುಟ್ಟಸ್ವಾಮಿ ಹೇಳಿದ ನಮ್ಮೆನೆಗೂ ನಮ್ಮ ದೊಡ್ಡಪ್ಪನ ಮನೆಗೂ ಓಣಿ ಇದೆಯಲ್ಲಾ ಅದೆ ಸರ್ ಸಂಧಿ ಅಂದ. ಎಂದು ಸದನವನ್ನು ನಗೆ ಗಡಲಲ್ಲಿ ತೇಲುವಂತೆ ಮಾಡಿದರು.
ಸಂಧಿ ಅಂದರೆ ಎನ್ರೀ ಡಾಕ್ಟರೇ, ಎಂಬಿಬಿಎಸ್ ಮಾಡಿದ್ರಲ್ಲಾ ನಿಮಗೆ ಗೊತ್ತಿದೆಯಾ ಎಂದು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ರನ್ನು ಕೇಳಿದರು. ಬಿ.ಆರ್ ಪಾಟೀಲ್ರೆ ನಿಮಗೆ ಗೊತ್ತಾ. ಯಾರಾದ್ರೂ ಹೇಳ್ರೀ.. ಎಂದು ಎಲ್ಲರಿಗೂ ಸವಾಲು ಹಾಕಿದರು. ಬಳಿಕ ಅಕ್ಷರಗಳು ಎಡೆಬಿಡದೇ ಒಂದಕ್ಕೊಂದು ಸೇರುವುದೇ ಸಂಧಿ ಎಂದು ಹೇಳಿದರು. ಸಂಧಿಗಳಲ್ಲಿ 3 ವಿಧ ಗುಣಸಂಧಿ, ಆಗಮ ಸಂಧಿ ,ಲೋಪ ಸಂಧಿ ಎಂದು ಸಿಎಂ ವಿವರಿಸಿದರು.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/