ಒಡಿಶಾ : ಪತಿಯ ಮೇಲೆ ಅನುಮಾಪಟ್ಟ ಪತ್ನಿಯೊಬ್ಬಳು ಪತಿ ನಿದ್ದೆ ಮಾಡುತ್ತಿದ್ದಾಗ ಆತನ ಮರ್ಮಾಂಗ ಕತ್ತರಿಸಿದ ಘಟನೆ ಭಾನುವಾರ ಒಡಿಶಾದ ನಬರಾಂಗಪುರ ಜಿಲ್ಲೆಯಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೂರು ತಿಂಗಳ ಹಿಂದೆ ಮನೆಗೆ ಬಂದಿದ್ದ. ತನ್ನ ಪತಿಗೆ ಅಕ್ರಮ ಸಂಬಂಧ ಇದೆ ಎಂದು ಪತ್ನಿ ಅನುಮಾನಪಟ್ಟಿದ್ದಳು. ಹಾಗಾಗಿ ರಾತ್ರಿ ಆತ ನಿದ್ದೆ ಮಾಡುತ್ತಿರುವಾಗ ಪತ್ನಿ ಮಧ್ಯರಾತ್ರಿ ಚೂಪಾದ ಕತ್ತಿಯಿಂದ ಪತಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ನೋವಿನಿಂದ ಕಿರುಚುತ್ತಿದ್ದ ಆತನ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಪತಿಯ ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ಬಂಧಿಸಿದ್ದಾರೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.