ನವದೆಹಲಿ(ಜು.27): ಸೋಮವಾರ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 39,361 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಇದೇ ಅವಧಿಯಲ್ಲಿ 416 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
* ಪಾಸಿಟಿವಿಟಿ ದರ 35 ದಿನದ ಗರಿಷ್ಠ
* ಕೋವಿಡ್ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ
* ಸಕ್ರಿಯ ಕೇಸು ಕೂಡ 4.11 ಲಕ್ಷಕ್ಕೆ ಹೆಚ್ಚಳ
* 39,361 ಕೇಸ್, 416 ಸಾವು
* 3ನೇ ಅಲೆ ಭೀತಿ ನಡುವೆಯೇ ಏರಿಕೆ
ಆದರೆ, 35 ದಿನಗಳ ಬಳಿಕ ದೈನಂದಿನ ಪಾಸಿಟಿವಿಟಿ ದರ ಶೇ.3ಕ್ಕಿಂತ ಹೆಚ್ಚು (3.41%) ದಾಖಲಾಗಿದೆ. ಇದೇ ವೇಳೆ, ಸಕ್ರಿಯ ಸೋಂಕಿತರ ಸಂಖ್ಯೆ 4.08 ಲಕ್ಷದಿಂದ 4.11 ಲಕ್ಷಕ್ಕೆ ಹೆಚ್ಚಳವಾಗಿದೆ. 3ನೇ ಅಲೆ ಏಳಬಹುದು ಎಂದು ತಜ್ಞರು ಹೇಳುತ್ತಿರುವ ನಡುವೆಯೇ ಪಾಸಿಟಿವಿಟಿ ದರ ಹಾಗೂ ಸಕ್ರಿಯ ಪ್ರಕರಣಗಳು ಏರಿಕೆ ಆಗಿರುವುದು ಎಚ್ಚರಿಕೆ ಗಂಟೆ.
ಇನ್ನು ಚೇತರಿಕೆ ಪ್ರಮಾಣ ಶೇ.97.35ರಷ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 3.14ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,20,967ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.05 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ಈವರೆಗೆ 43.51 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.
- ಒಟ್ಟು ಸೋಂಕು 3.14 ಕೋಟಿ
- ಒಟ್ಟು ಸಾವು 4.20 ಲಕ್ಷ