ನವದೆಹಲಿ: ಕೊರೋನಾ ಮೂರನೇ ಅಲೆ ಆಗಸ್ಟ್ ನಲ್ಲಿ ದೇಶದಲ್ಲಿ ಕಂಡುಬರುವ ಸಾಧ‍್ಯತೆಯಿದ್ದು, ಸೆಪ್ಟೆಂಬರ್ ನಲ್ಲಿ ತೀವ್ರವಾಗಲಿದೆ ಎಂದು ಎಸ್ ಬಿಐ ಸಂಶೋಧನಾ ವರದಿ ಹೇಳಿದೆ.
ಪ್ರಸಕ್ತ ವಿದ್ಯಮಾನ ಗಮನಿಸಿದರೆ ಜುಲೈ ಎರಡನೇ ವಾರ 10 ಸಾವಿರದ ಆಸುಪಾಸು ಪ್ರಕರಣ ಕಂಡುಬರಬಹುದು. ಆದರೆ ಆಗಸ್ಟ್ ನಲ್ಲಿ ಮೂರನೇ ಅಲೆ ಬರಲಿದೆ ಎಂದು ವರದಿ ಹೇಳಿದೆ.
ಕೊರೋನಾ ಎರಡನೇ ಅಲೆ ಏಪ್ರಿಲ್ ನಲ್ಲಿ ಆರಂಭವಾಗಿ ಮೇನಲ್ಲಿ ತೀವ್ರವಾಗಿತ್ತು. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಉತ್ತರ ಪ್ರದೇಶಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿತ್ತು. ಈಗಲೂ ಕೇರಳದಲ್ಲಿ ಪ್ರತಿನಿತ್ಯ ಅಧಿಕ ಪ್ರಕರಣಗಳು ಕಂಡುಬರುತ್ತಿವೆ. ಮೂರನೇ ಅಲೆಯೂ ಇದೇ ರೀತಿ ಆಗಸ್ಟ್ ನಲ್ಲಿ ಆರಂಭವಾಗಿ ಸೆಪ್ಟೆಂಬರ್ ನಲ್ಲಿ ತೀವ್ರವಾಗುವ ಸಾಧ್ಯತೆಯಿದೆ.