ಕೊರೊನಾ ದಿಢೀರ್ ಸ್ಫೋಟ, ಹೈಅಲರ್ಟ್!

Webdunia
ಶುಕ್ರವಾರ, 3 ಜೂನ್ 2022 (09:38 IST)
ಮುಂಬೈ : ದೇಶದಲ್ಲಿ ಕೊರೋನಾ ಜೂನ್ ಹೊತ್ತಿಗೆ ಮತ್ತೆ ಕಾಡಲಿದೆ ಎನ್ನುವ ಲೆಕ್ಕಾಚಾರ, ಎಚ್ಚರಿಕೆಗಳ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಅಪಾಯಕಾರಿ ವೈರಾಣು ಸ್ಫೋಟವಾಗಿದೆ.
 
ಒಂದೂವರೆ ತಿಂಗಳ ಬಳಿಕ ದಿಢೀರ್ 7 ಪಟ್ಟು ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 626 ರಿಂದ 4,500ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಮುಂಬೈ, ಪುಣೆಯಲ್ಲಿ ಶೇ.97ರಷ್ಟು ಸಕ್ರಿಯ ಪ್ರಕರಣಗಳಿವೆ.

ಹೀಗಾಗಿ, ಎಚ್ಚೆತ್ತ ಸಿಎಂ ಉದ್ಧವ್ ಠಾಕ್ರೆ ತುರ್ತಾಗಿ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಹೈಅಲರ್ಟ್ ಘೋಷಿಸಿದ್ದಾರೆ.  ಕೊರೋನಾ ಸ್ಥಿತಿಗತಿಗಳು, ವೈದ್ಯಕೀಯ ಸೇವೆಗಳ ಉಪಲಭ್ಯತೆ ಬಗ್ಗೆ ಚರ್ಚಿಸಿದ ಉದ್ಧವ್ ಠಾಕ್ರೆ, ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗದಂತೆ, ಆಕ್ಸಿಜನ್ ಪೂರೈಕೆ, ಔಷಧಗಳ ದಾಸ್ತಾನು ಕಡಿಮೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಜ್ವರ, ಶೀತ, ಕೆಮ್ಮು ಅಥವಾ ಎದೆನೋವು ಕಂಡು ಬಂದರೆ ಕೊರೋನಾ ಪರೀಕ್ಷೆ ಮಾಡಿಸಿ ಎಂದು ರಾಜ್ಯದ ಜನರಿಗೆ ಸಂದೇಶ ನೀಡಿದ್ದಾರೆ.

ಕರ್ನಾಟಕದಲ್ಲೂ ಕೊರೊನಾ ಏರಿಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 297 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ 276 ಮಂದಿಗೆ ಸೋಂಕು ಅಂಟಿದೆ. ಸದ್ಯ ಸಾವಾಗದೇ ಇರುವುದು ಸಮಾಧಾನಕರ ಸಂಗತಿ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಧಾರ್ಮಿಕ ತಾಣದಲ್ಲಿ ಯುವಕ, ಯುವತಿ ಅಸಭ್ಯ ವರ್ತನೆ: ಕ್ಯಾಮರಾ ನೋಡುತ್ತಿದ್ದಂತೇ ಎಸ್ಕೇಪ್ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಆರ್ ಎಸ್ಎಸ್ ಬ್ಯಾನ್ ಮಾಡಲು ಪ್ರಿಯಾಂಕ್ ಖರ್ಗೆಗೆ ಸಾಧ್ಯವೇ, ಕಾನೂನಿನ ಬಗ್ಗೆ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಿವರಣೆ

Shocking video: ನವಜಾತ ಮಗುವೇನು ಆಟದ ವಸ್ತುವಾ...: ಈ ಪಾಪಿಗೆ ಯಾವ ಶಿಕ್ಷೆ ಕೊಡಬೇಕು ನೀವೇ ಹೇಳಿ

ಮುಂದಿನ ಸುದ್ದಿ
Show comments