Publish Date: Thu, 19 Mar 2020 (08:00 IST)
Updated Date: Thu, 19 Mar 2020 (08:01 IST)
ಕೋಲ್ಕತ್ತಾ : ಕೊರೊನಾ ಸೋಂಕಿಗೆ ಮದ್ದು ಎಂದು ಜನರಿಗೆ ಗೋಮೂತ್ರ ಕುಡಿಸಿದ ಬಿಜೆಪಿ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಕೋಲ್ಕತ್ತಾದ ಜೋರಸಖೋ ಪ್ರದೇಶದಲ್ಲಿ ನಡೆದಿದೆ.
ನಾರಾಯಣ್ ಚಟರ್ಜಿ(40) ಬಂಧಿತ ಬಿಜೆಪಿ ಮುಖಂಡ. ಈತ ಅಲ್ಲಿನ ಸ್ಥಳೀಯರಿಗೆ ಗೋಮೂತ್ರದಲ್ಲಿ ಪವಾಡವಿದೆ, ಔಷಧೀಯ ಗುಣವಿದೆ, ಇದು ಕೊರೊನಾ ವೈರಸ್ ಗೆ ರಾಮಾಬಾಣವೆಂದು ಹೇಳಿ ಸ್ಥಳೀಯರಿಗೆ ಕುಡಿಸಿದ್ದಾರೆ. ಗೋಮೂತ್ರ ಸೇವಿಸಿದ್ದ ಕೆಲವು ಸ್ಥಳೀಯರು ಆಸ್ಪತ್ರೆಗೆ ದಾಖಲಾಗಿದ್ದು, ಮುಖಂಡನ ವಿರುದ್ಧ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಬಿಜೆಪಿ ಮುಖಂಡ ನಾರಾಯಣ್ ಚಟರ್ಜಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ವಿರೋಧ ವ್ಯಕ್ತಪಡಿಸಿದ್ದಾರೆ.