ಕೆಂಪುಕೋಟೆಗೆ ಕಂಟೇನರ್ ಕೋಟೆಯ ಭದ್ರತೆ!

Webdunia
ಸೋಮವಾರ, 9 ಆಗಸ್ಟ್ 2021 (08:11 IST)
ನವದೆಹಲಿ(ಆ.09): ಗಣರಾಜ್ಯೋತ್ಸವದ ವೇಳೆ ರೈತರು ಟ್ರಾಕ್ಟರ್ ರಾರಯಲಿ ನಡೆಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿರುವ ದೆಹಲಿ ಪೊಲೀಸರು ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಪ್ರವೇಶ ದ್ವಾರದ ಬಳಿ ಹಡಗಿನ ಬೃಹತ್ ಕಂಟೇನರ್ಗಳನ್ನು ಗೋಡೆಗಳಂತೆ ಪೊಲೀಸರು ನಿಲ್ಲಿಸಿದ್ದಾರೆ. ಜೊತೆಗೆ ಕಂಟೇನರ್ಗಳನ್ನು ಅಲಂಕರಿಸಿ, ಬಣ್ಣಗಳನ್ನು ಬಳಿಯಲಾಗಿದೆ. ಜಮ್ಮು- ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯ ಕಾರಣದಿಂದಾಗಿಯೂ ರಾಷ್ಟ್ರ ರಾಜಧಾನಿ ಬಿಗಿ ಬಂದೋಬಸ್್ತ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ನೂರಾರು ಟ್ರಾಕ್ಟರ್ಗಳಲ್ಲಿ ಆಗಮಿಸಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ಆಸ್ತಿ- ಪಾಸ್ತಿಗೆ ಹಾನಿ ಸಂಭವಿಸಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರಾನ್ಸ್‌ನಲ್ಲಿ ನಾಗರಿಕ ವಿಮಾನ ಅಪಘಾಥ: 11ಮಂದಿ ಸಾವು, Video

ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಕಂಡುಬಂದಲ್ಲಿ ಪಾನ್‌ ಮಸಾಲಾ, ಗುಟ್ಕಾ ಸಂಪೂರ್ಣ ಬ್ಯಾನ್, ಡಿಕೆ ಶಿವಕುಮಾರ್ ವಾರ್ನಿಂಗ್‌

ಅಯೋದ್ಯೆ ರಾಮಮಂದಿರ ದೇಣಿಗೆ ವಿವಾದ: ಮಹತ್ವದ ಪೋಸ್ಟ್ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌

ಮತದಾರರು, ಪ್ರಜಾಪ್ರಭುತ್ವದ ಮಾರಣಹೋಮ ಎಂದಿದ್ಯಾಕೆ ಮಾಜಿ ಸಿಎಂ ಸಿದ್ದರಾಮಯ್ಯ

ಎಸ್‌ಐಆರ್‌ ಪ್ರಕ್ರಿಯೆಯನ್ನು ಎರಡನೇ ಸಂಗ್ರಾಮದಂತೆ ಹೋರಾಟ ಮಾಡಬೇಕು: ಬಿಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments