ನವದೆಹಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಕರ್ನಾಟಕ ಚುನಾವಣೆ ರಾಜ್ಯ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಮುಂದಿನ 75 ದಿನಗಳಲ್ಲಿ ಏನೇನು ಮಾಡಬೇಕು? ಸರ್ಕಾರದ ವಿರುದ್ಧ ಯಾವರೀತಿ ಹೋರಾಟ ನಡೆಸಬೇಕು ಎಂಬ ಬಗ್ಗೆ ರಣತಂತ್ರ ರೂಪಿಸಿದ್ದಾರೆ. ಪ್ರಮುಖವಾಗಿ ನೀರಾವರಿ ವಿಚಾರ, ಸರ್ಕಾರದ ವಿರುದ್ಧದ ಕಮೀಷನ್ ಆರೋಪ ಮುಂದಿಟ್ಟುಕೊಂಡು ಜನರ ಬಳಿ ಹೋಗಲು ತೀರ್ಮಾನಿಸಲಾಗಿದೆ.
* ಮುಂದಿನ 75 ದಿನ ರಾಜ್ಯದಲ್ಲಿ ಸರಣಿ ಕಾರ್ಯಕ್ರಮ
* ಡಿಸೆಂಬರ್ 30 – ವಿಜಯಪುರದಲ್ಲಿ `ಕೃಷ್ಣ ರ್ಯಾಲಿ
* ಜನವರಿ 2 – ಹುಬ್ಬಳ್ಳಿಯಲ್ಲಿ `ಮಹದಾಯಿ ರ್ಯಾಲಿ
* ಜನವರಿ 8 – ಚಿತ್ರದುರ್ಗದಲ್ಲಿ ಎಸ್ಸಿ,ಎಸ್ಟಿ ರ್ಯಾಲಿ
* ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಅಸ್ತ್ರ
* ಸಿದ್ದರಾಮಯ್ಯ, ಡಿಕೆಶಿ ಜಂಟಿಯಾಗಿ ರಥಯಾತ್ರೆ
* ಜಾತಿ ಸಭೆಗಳಲ್ಲಿ ಏನು ಮಾತಾಡ್ಬೇಕು ಎಂಬುದಕ್ಕೆ ಸಲಹಾ ಸಮಿತಿ
* ಮೀಸಲಾತಿ ವಿಚಾರವಾಗಿ ಮೌನ ವಹಿಸಲು ಸೂಚನೆ
* ಜನವರಿ 4ನೇ ವಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಯಾತ್ರೆ