ತಿರುವನಂತಪುರಂ: ಶಬರಿಮಲೆಯಲ್ಲಿ ಮಹಿಳೆಯ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ನಡೆಯುತ್ತಿರುವ ಪ್ರತಿಭಟನೆ ಜೋರಾಗುತ್ತಿರುವ ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳದ ರಮೇಶ್ ಚೆನ್ನಿತ್ತಲ ಈ ವಿವಾದವನ್ನು ನಮ್ಮ ಸರ್ಕಾರವಿದ್ದರೆ ಬೇರೆಯದೇ ರೀತಿಯಲ್ಲಿ ನಿಭಾಯಿಸುತ್ತಿತ್ತು ಎಂದಿದ್ದಾರೆ.
‘ಶಬರಿಮಲೆ ಟೂರಿಸ್ಟ್ ಸ್ಥಳವಲ್ಲ. ಅಲ್ಲಿಗೆ ಭಕ್ತರು ಮಾತ್ರ ಹೋಗುತ್ತಾರೆ. ಇದೀಗ ಕೇರಳ ಪೊಲೀಸರು ನಿಭಾಯಿಸುತ್ತಿರುವ ರೀತಿಯೇ ಸರಿಯಲ್ಲ. ನಮ್ಮ ಸರ್ಕಾರವಿದ್ದಿದ್ದರೆ ಭಕ್ತರೊಂದಿಗೆ ಮಾತನಾಡಿ ಹಿಂಸಾತ್ಮಕ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತಿದ್ದೆವು’ ಎಂದು ಕೇರಳ ಚೆನ್ನಿತ್ತಲ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.