Publish Date: Sat, 27 Oct 2018 (08:22 IST)
Updated Date: Sat, 27 Oct 2018 (08:24 IST)
ನವದೆಹಲಿ: ದೇಶದೆಲ್ಲೆಡೆ ಮೀ ಟೂ ಅಭಿಯಾನ ಸದ್ದು ಮಾಡುತ್ತಿದ್ದರೆ, ಕಾಂಗ್ರೆಸ್ ಶಾಸಕರೊಬ್ಬರು ಇದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೀ ಟೂ ಅಭಿಯಾನದಲ್ಲಿ ಮಹಿಳೆಯರು ಪುರುಷರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಲು ಹಣ ಪಡೆಯುತ್ತಿದ್ದಾರೆ ಎಂದು ಮಧ‍್ಯಪ್ರದೇಶದ ಕಾಂಗ್ರೆಸ್ ಶಾಸಕ ಗೋವಿಂದ್ ಸಿಂಗ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
‘ನಮ್ಮ ಗ್ರಾಮದಲ್ಲಿ ಹಲವು ಮೀ ಟೂ ಘಟನೆಗಳಾಗಿವೆ. ಹಲವು ಪ್ರಕರಣಗಳಲ್ಲಿ ಮಹಿಳೆಯರು ಹಣ ಪಡೆದು ಸುಮ್ಮನಾಗುತ್ತಾರೆ ಮತ್ತೆ ಕೆಲವರು ತಮ್ಮ ವೈಯಕ್ತಿಕ ಧ್ವೇಷ ಸಾಧಿಸಲು ಇದನ್ನು ಬಳಸುತ್ತಿದ್ದಾರೆ’ ಎಂದು ಗೋವಿಂದ್ ಸಿಂಗ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.