Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿ ಎಡವಟ್ಟು ಮಾಡಿದ ಕಾಂಗ್ರೆಸ್

ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿ ಎಡವಟ್ಟು ಮಾಡಿದ ಕಾಂಗ್ರೆಸ್
ನವದೆಹಲಿ , ಬುಧವಾರ, 22 ನವೆಂಬರ್ 2017 (09:03 IST)
ನವದೆಹಲಿ: ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿಯನ್ನು ಅವಹೇಳನ ಮಾಡುವುದಿಲ್ಲ, ಅದೆಲ್ಲಾ ಬಿಜೆಪಿ ಸಂಸ್ಕೃತಿ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಯುವ ಘಟಕವೇ ಎಡವಟ್ಟು ಮಾಡಿಕೊಂಡಿದೆ.
 

ಪ್ರಧಾನಿ ಮೋದಿಯವರನ್ನು ವೈಯಕ್ತಿಕವಾಗಿ ಅವಹೇಳನ ಮಾಡುವಂತಹ ಟ್ವೀಟ್ ಮಾಡಿದ ಕಾಂಗ್ರೆಸ್ ಯುವ ಘಟಕ ನಂತರ ವಿವಾದವಾಗುತ್ತಿದ್ದಂತೆ ಡಿಲೀಟ್ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಿಸಿದ ಬೆನ್ನಲ್ಲೇ ಟ್ವಿಟರ್ ನಲ್ಲಿ ಕಾಂಗ್ರೆಸ್ ಆಕ್ಷೇಪಾರ್ಹ ಟ್ವೀಟ್ ಮಾಡಿದೆ. ಟ್ರಂಪ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ ಜತೆ ಮೋದಿ ನಡೆಸುವ ಸಂಭಾಷಣೆಯ ಫೋಟೋ ಪ್ರಕಟಿಸಲಾಗಿದೆ.

ಇದರಲ್ಲಿ ಮೋದಿ ‘ಪ್ರತಿಪಕ್ಷಗಳು ನನ್ನ ವಿರುದ್ಧ ಎಷ್ಟೊಂದು ಮೆಮೆ (meme) ಹೇಳುತ್ತಿವೆ ಎನ್ನುವುದು ಗೊತ್ತೇ?’ ಎನ್ನುತ್ತಾರೆ. ಅದಕ್ಕೆ ಟ್ರಂಪ್ ಅದು ಮೆಮೆ ಅಲ್ಲ ಮೀಮ್’ ಎನ್ನುತ್ತಾರೆ. ಅದಕ್ಕೆ ಥೆರೇಸಾ ‘ನೀವು ಚಹಾ ಮಾರಲು ಹೋಗಿ’ ಎನ್ನುತ್ತಾರೆ.

ಈ ಫೋಟೋ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಬಡವರ ವಿರುದ್ಧದ ನಿಲುವನ್ನು ಸೂಚಿಸುತ್ತದೆ. ಇದನ್ನೂ ರಾಹುಲ್ ಸಮರ್ಥಿಸುತ್ತಾರೆಯೇ? ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಪ್ರಶ್ನಿಸಿದ್ದರು. ಇದು ಬೇರೆ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಈ ಲೇವಡಿ ಒಪ್ಪುವುದಿಲ್ಲ ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾನುಷಿ ವಿಶ್ವಸುಂದರಿ ಸ್ಪರ್ಧೆ ಗೆದ್ದಿದ್ದೂ ಪ್ರಧಾನಿ ಮೋದಿಯಂತೆ!