ಪಾಟ್ನಾ : ಕ್ವಾರಂಟೈನ್ ನಲ್ಲಿದ್ದ ಪ್ರವಾಸಿ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಿದೆ.
ಲಾಕ್ ಡೌನ್ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇದೀಗ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್ ಗಳನ್ನು ಉಚಿತವಾಗಿ ವಿತರಣೆ ಮಾಡಿದೆ.
ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬಿಹಾರ ಕುಟುಂಬ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಈ ಹೊಸ ಯೋಜನೆಯನ್ನು ಜಾರಿ ಮಾಡಿದೆ ಎನ್ನಲಾಗಿದೆ.