ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಘಟನೆಗೆ ಇಡೀ ದೇಶದಲ್ಲಿ ವ್ಯಾಪಕ ಆಕ್ರೋಶ ಹೆಚ್ಚಾಗುತ್ತಿದೆ.
ಕೇಸ್ ತನಿಖೆಯನ್ನು ಯುಪಿ ಸರಕಾರ ಸಿಬಿಐಗೆ ವಹಿಸಿದೆ.
ಈ ನಡುವೆ ಸಂತ್ರಸ್ತೆಯ ಕುಟುಂಬಕ್ಕೆ ಹತ್ರಾಸ್ ಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.
ಡಿಸಿ ಬೆದರಿಕೆ ಹಾಕಿದ್ದರೂ ಯುಪಿ ಸರಕಾರ ಸೈಲೆಂಟ್ ಆಗಿರುವುದಕ್ಕೆ ಬಿಎಸ್ ಪಿ ಅಧ್ಯಕ್ಷೆ ಮಯಾವತಿ ಕಿಡಿಕಾರಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.