Publish Date: Sat, 23 Apr 2022 (11:01 IST)
Updated Date: Sat, 23 Apr 2022 (10:35 IST)
ಇತ್ತೀಚೆಗೆ ತನ್ನ ನಾದಿನಿಯ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ,
ಶನಿವಾರ ಪಶ್ಚಾತ್ತಾಪದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಸಮೀಪದ ನಿವಾಸಿ ದೀಪು(31) ಮೃತನಾಗಿದ್ದು,
ಜೈಲಿನ ಕ್ವಾರಂಟೈನ್ ಕೇಂದ್ರದ ಸ್ನಾನಗೃಹದಲ್ಲಿ ಬೆಳಗ್ಗೆ 5.20ರ ಸುಮಾರಿಗೆ ಬೆಡ್ ಶಿಟ್ನಿಂದ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಆತನನ್ನು ರಕ್ಷಿಸಿದ ಜೈಲು ಸಿಬ್ಬಂದಿ,
ಜೈಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Ramya kosira
Publish Date: Sat, 23 Apr 2022 (11:01 IST)
Updated Date: Sat, 23 Apr 2022 (10:35 IST)