Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೆನ್ನೈ: ಏರ್‌ ಶೋ ವೇಳೆ ಐವರು ಸಾವು, ಸಂತ್ರಸ್ತರ ಕುಟಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Chennai Indian Air Force Air Show,  Tamil Nadu Chief Minister MK Stalin, Indian Air Force Tragedy

Sampriya

ತಮಿಳುನಾಡು , ಸೋಮವಾರ, 7 ಅಕ್ಟೋಬರ್ 2024 (19:08 IST)
Photo Courtesy X
ತಮಿಳುನಾಡು: ಚೆನ್ನೈನಲ್ಲಿ ನಡೆದ ಭಾರತೀಯ ವಾಯುಪಡೆಯ (ಐಎಎಫ್) ವೈಮಾನಿಕ ಪ್ರದರ್ಶನದ ವೇಳೆ ನೆರೆದಿದ್ದ ಪ್ರೇಕ್ಷಕರಲ್ಲಿ ಐವರು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನದ ಕಾರ್ಯಕ್ರಮದಲ್ಲಿ 5 ಜನರ ನಿಧನಕ್ಕೆ ಸಂತಾಪ ಸೂಚಿಸಿದರು.

ಸಿಎಂ ಎಂ.ಕೆ.ಸ್ಟಾಲಿನ್ ಹೇಳಿಕೆ ನೀಡಿ, ಅಧಿಕ ಶಾಖ ಹಾಗೂ ಇತರೆ ವೈದ್ಯಕೀಯ ಕಾರಣಗಳಿಂದ 5 ಸಾವುಗಳು ಸಂಭವಿಸಿವೆ ಎಂದು ತಿಳಿದು ನೋವಾಗಿದೆ. ಐಎಎಫ್ ಬೇಡಿಕೆಯಂತೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾಲ್ತುಳಿತವನ್ನು ತಪ್ಪಿಸಲಾಗಿದೆ ಎಂದು ಅವರು ಹೇಳಿದರು.

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದ್ದು, ಈ ವೇಳೆ ನೆರೆದಿದ್ದ ಪ್ರೇಕ್ಷಕರಲ್ಲಿ ಐವರು ಸಾವನ್ನಪ್ಪಿದ್ದು 50 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಜಲೀಕರಣ ಮತ್ತು ತೀವ್ರ ನಿಶ್ಯಕ್ತಿಯ ಕಾರಣದಿಂದ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ. ಜನದಟ್ಟಣೆ ಹೆಚ್ಚಾಗಿದ್ದು, ಕಳಪೆ ನಿರ್ವಹಣೆ, ಸಂಚಾರ ಯೋಜನೆಯ ಕೊರತೆ, ಅಸಮರ್ಪಕ ಸಾರ್ವಜನಿಕ ಸಾರಿಗೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವದಂತಿಗಳು ಆಧಾರರಹಿತ: ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ ರತನ್ ಟಾಟಾ