ಬೆಂಗಳೂರು: ಚಂದ್ರಯಾನ 3 ಯಶಸ್ವಿಯಾಗಿ ತಿಂಗಳಾಗುತ್ತಾ ಬಂದ ಬೆನ್ನಲ್ಲೇ ಶಶಿಯ ಮಡಿಲಲ್ಲಿ ಮಲಗಿ ನಿದ್ರಿಸುತ್ತಿರುವ ಪುಟ್ಟ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ನನ್ನು ಎಚ್ಚರಗೊಳಿಸಿ ಎರಡನೇ ಹಂತದ ಅಧ್ಯಯನಕ್ಕೆ ತಯಾರಿ ನಡೆಸಿದೆ.
ಚಂದ್ರನ ಮೇಲೆ ಇದೀಗ ಸೂರ್ಯನ ಬೆಳಕು ಬೀಳುತ್ತಿರುವ ಹಿನ್ನಲೆಯಲ್ಲಿ ಮತ್ತೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನನ್ನು ಚಾಲೂಗೊಳಿಸಲು ಇಸ್ರೋ ಪ್ರಯತ್ನಿಸಲಿದೆ. ಒಂದು ವೇಳೆ
ಆಗಸ್ಟ್ 23 ರಂದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದ್ದ ವಿಕ್ರಮ್ ಲ್ಯಾಂಡರ್ ಬಳಿಕ ಕೆಲವು ದಿನಗಳ ಕಾಲ ಪ್ರಗ್ಯಾನ್ ರೋವರ್ ಸಹಾಯದಿಂದ ಕೆಲವು ದಿನಗಳವರೆಗೆ ಅಧ್ಯಯನ ನಡೆಸಿತ್ತು. ಬಳಿಕ ಚಂದ್ರನ ಮೇಲೆ ಸೂರ್ಯನ ಕಿರಣ ಇಲ್ಲದೇ ಇದ್ದಾಗ ತಾತ್ಕಾಲಿಕವಾಗಿ ಪ್ರಗ್ಯಾನ್ ರೋವರ್ ನನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಇದೀಗ ಮತ್ತೆ ಸೂರ್ಯ ಕಿರಣಗಳು ಚಂದ್ರನನ್ನು ಸ್ಪರ್ಶಿಸುವುದರಿಂದ ಮತ್ತೆ ರೋವರ್ ನನ್ನು ಚಾಲೂಗೊಳಿಸಲು ಪ್ರಯತ್ನ ನಡೆಸಲಾಗುತ್ತದೆ. ಒಂದು ವೇಳೆ ಈ ಪ್ರಯೋಗದಲ್ಲಿ ಯಶಸ್ವಿಯಾದರೆ ಮತ್ತಷ್ಟು ದಿನ ಚಂದ್ರನ ಮೇಲ್ಮೈ ಮೇಲೆ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ. ಈ ಒಂದು ಪ್ರಯೋಗಕ್ಕಾಗಿ ಇಂದು ವಿಶ್ವವೇ ಎದಿರು ನೋಡುತ್ತಿದೆ.