Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುಪಿಎ ಕೊಟ್ಟಿದ್ದೆಷ್ಟು? ಎನ್ ಡಿಎ ಕೊಟ್ಟಿದ್ದೆಷ್ಟು? ಫೆ.10 ಕ್ಕೆ ಶ್ವೇತಪತ್ರ ಹೊರಡಿಸಲಿರುವ ಕೇಂದ್ರ

Nirmala Sitharaman

Krishnaveni K

ನವದೆಹಲಿ , ಬುಧವಾರ, 7 ಫೆಬ್ರವರಿ 2024 (11:42 IST)
ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳು ತೆರಿಗೆ ಹಂಚಿಕೆ ವಿಚಾರದಲ್ಲಿ ನಮಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಯುಪಿಎ ಮತ್ತು ಎನ್ ಡಿಎ ಅವಧಿಯಲ್ಲಿ ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲು ಮುಂದಾಗಿದೆ.

ಫೆಬ್ರವರಿ 10 ರಂದು ಕೇಂದ್ರ ಸರ್ಕಾರ ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಅವಧಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಹಣ ವಿತರಿಸಿದೆ, ಸರ್ಕಾರದ ಆರ್ಥಿಕ ಸ್ಥಿತಿಗತಿ ಆಗ ಹೇಗಿತ್ತು? ಈಗ ಹೇಗಾಗಿದೆ ಎಂಬುದರ ಕುರಿತು ವಿವರ ನೀಡುವ ಶ್ವೇತಪತ್ರ ಬಿಡುಗಡೆ ಮಾಡಲಿದೆ.

ಸಂಸತ್ತು ಅಧಿವೇಶನ ವಿಸ್ತರಣೆ
ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನವನ್ನು ಶನಿವಾರದವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕೊನೆಯ ದಿನ ಯುಪಿಎ ಮತ್ತು ಎನ್ ಡಿಎ ಅವಧಿಯ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 2009 ಕ್ಕಿಂತ ಮೊದಲು ಯುಪಿಎ ಅವಧಿ ಮತ್ತು 2014 ರಲ್ಲಿ ಮೋದಿ ನೇತೃತ್ವದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದ ನಂತರ ಅರ್ಥ ವ್ಯವಸ್ಥೆಯ ಬಗ್ಗೆ ಈ ಶ್ವೇತಪತ್ರ ಮಾಹಿತಿ ನೀಡಲಿದೆ. ಶ್ವೇತಪತ್ರ ಮಂಡಿಸುವ ಬಗ್ಗೆ ಈಗಾಗಲೇ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆಯೇ ಹೇಳಿದ್ದರು.

ದಕ್ಷಿಣ ಭಾರತದ ರಾಜ್ಯಗಳ ಆರೋಪ
ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಈಗಾಗಲೇ ಕೇಂದ್ರ ಸರ್ಕಾರ ನಮಗೆ ನಮ್ಮ ತೆರಿಗೆ ಹಣವನ್ನೇ ಕೊಡದೇ ವಂಚಿಸುತ್ತಿದೆ ಎಂದು ಆರೋಪಿಸಿದೆ. ಇದರ ಬಗ್ಗೆ ಈ ರಾಜ್ಯಗಳು ಮುಖ್ಯಮಂತ್ರಿ ನೇತೃತ್ವದಲ್ಲಿ ದೆಹಲಿಯಲ್ಇ ಪ್ರತಿಭಟನೆಗೆ ಮುಂದಾಗಿದೆ. ಇದು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ‍್ಯತೆಯಿದೆ. ಈ ಹಿನ್ನಲೆಯಲ್ಲಿ ಶ್ವೇತಪತ್ರ ಬಿಡುಗಡೆ ಮಾಡಿ ಎಲ್ಲಾ ಆರೋಪಗಳಿಗೂ ಉತ್ತರ ಕೊಡಲು ಕೇಂದ್ರ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೂರ್ಕೆಲಾದಲ್ಲಿ ರಾಹುಲ್ ಗಾಂಧಿ ಪೂಜೆ, ನಾಮ ಚಿಕ್ಕದಾಗಿರಲಿ ಎಂದಿದ್ದಕ್ಕೆ ಟ್ರೋಲ್