Select Your Language

Notifications

webdunia
webdunia
webdunia
webdunia

ತಿರುಪತಿ ದೇಗುಲದಲ್ಲಿ ಕಾರ್ಯನಿರ್ವಹಿಸಲು ಮುಸ್ಲಿಮರಿಗೂ ಅವಕಾಶ!

ತಿರುಪತಿ

geetha

ಆಂಧ್ರಪ್ರದೇಶ , ಮಂಗಳವಾರ, 6 ಫೆಬ್ರವರಿ 2024 (19:21 IST)
ಆಂಧ್ರಪ್ರದೇಶ :ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೂ ಭಾಗವಹಿಸಲು ಅವಕಾಶ ನೀಡುವ ಸಾಧ್ಯತೆಯ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿರುಪತಿ ತಿರುಪತಿ ದೇವಾಲಯ ಟ್ರಸ್ಟ್‌ ತಿಳಿಸಿದೆ. ಈ ಮೊದಲಿನಿಂದಲೂ ಸಹ ಭಿನ್ನ ಧಾರ್ಮಿಕ ನಂಬಿಕೆಯುಳ್ಳವರು ತಿರುಪತಿ ದೇಗುಲಕ್ಕೆ ದೇಣಿಗೆ ನೀಡುತ್ತಾ ಬಂದಿದ್ದಾರೆ ಎಂದು ಟಿಟಿಡಿ ಅಧಿಕಾರಿ ಧರ್ಮಾರೆಡ್ಡಿ ತಿಳಿಸಿದ್ದಾರೆ.ಶ್ರೀವಾರಿ ಸೇವೆಯು ಕಾರ್ಯಕರ್ತರಿಂದ ನಡೆಸಲ್ಪಡುವ ಸ್ವಯಂಸೇವಾ ಕಾರ್ಯಗಳಾಗಿದೆ. ಇಲ್ಲಿಗೆ ದೂರದ ಊರುಗಳಿಂದ ಬರುವ ಯಾತ್ರಿಕರಿಗೆ ಉನ್ನತ ಗುಣಮಟ್ಟದ ಅನುಕೂಲತೆಗಳನ್ನು ನೀಡುವುದು ಇದರ ಉದ್ದೇಶವಾಗಿದೆ. 

ಮೇಲುಸ್ತುವಾರಿಕೆ, ಆರೋಗ್ಯ ಸೇವೆ, ಅನ್ನ ಪ್ರಸಾದ, ತೋಟಗಳ ನಿರ್ವಹಣೆ, ಔಷಧಿ ವಿತರಣೆ, ಲಡ್ಡು ಪ್ರಸಾದ ವಿತರಣೆ, ದೇಗುಲ ಮತ್ತು ಕಚೇರಿಗಳ ನಿರ್ವಹಣೆ , ಸಾರಿಗೆ ವ್ಯವಸ್ಥೆ ಮತ್ತು ಪುಸ್ತಕ ಮಳಿಗೆಗಳ ಮೇಲ್ವಿಚಾರಣೆ ಶ್ರೀವಾರಿ ಸೇವೆಯಲ್ಲಿ ಒಳಗೊಂಡಿವೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್‌ ಗಾಂಧಿ ವಿಡಿಯೋ ವೈರಲ್‌