ನವದೆಹಲಿ: ರಾಜೀವ್ ಗಾಂಧಿ ಫೌಂಡೇಷನ್ ಗೆ ಚೀನಾ ದೇಣಿಗೆ ನೀಡಿತ್ತು ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಇದೀಗ ಕೇಂದ್ರ ವಿತ್ತ ಸಚಿವಾಲಯ ಗಾಂಧಿ ಕುಟುಂಬಕ್ಕೆ ಸೇರಿದ ಮೂರು ಟ್ರಸ್ಟ್ ಗಳ ವಿಚಾರಣೆ ನಡೆಸಲು ಮುಂದಾಗಿದೆ.
ರಾಜೀವ್ ಗಾಂಧಿ ಟ್ರಸ್ಟ್, ರಾಜೀವ್ ಗಾಂಧಿ ಫೌಂಡೇಷನ್ ಮತ್ತು ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್ ಎಂಬ ಮೂರು ಚ್ಯಾರಿಟಿ ಸಂಸ್ಥೆಗಳ ಆದಾಯ, ಅವುಗಳಿಗೆ ದೇಣಿಗೆ ಹರಿದುಬಂದಿರುವ ಮೂಲಗಳ ಬಗ್ಗೆ ವಿಚಾರಣೆ ನಡೆಸಲು ನಿರ್ಧರಿಸಿರುವ ವಿತ್ತ ಸಚಿವಾಲಯ ಪ್ರತ್ಯೇಕ ತನಿಖಾ ತಂಡ ನಿಯಮಿಸಿದೆ.
ಈ ತನಿಖಾ ಸಮಿತಿಗೆ ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಅವರಲ್ಲದೆ ವಿತ್ತ ಖಾತೆ, ಗೃಹ ಖಾತೆ ಮತ್ತು ಆದಾಯ ತೆರಿಗೆ ಇಲಾಖೆಯ ಪ್ರಮುಖರು ಈ ಸಮಿತಿಯ ಸದಸ್ಯರಾಗಲಿದ್ದಾರೆ.