ಬೆಂಗಳೂರು: ಕೇಂದ್ರ ಬಜೆಟ್ 2024 ನಾಳೆ ಸಂಸತ್ ನಲ್ಲಿ ಮಂಡನೆಯಾಗಲಿದ್ದು, ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಮೇಲೆ ರಾಜ್ಯಕ್ಕೆ ಯಾವೆಲ್ಲಾ ಕೊಡುಗೆಗಳ ನಿರೀಕ್ಷೆಯಿದೆ ಎಂದು ನೋಡೋಣ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದು ಮೂರನೇ ಬಾರಿಗೆ ಸತತವಾಗಿ ಅಧಿಕಾರಕ್ಕೇರಿದೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ಈ ಬಾರಿ ಬಿಜೆಪಿ ಮಿತ್ರ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಿರುವುದರಿಂದ ಬಜೆಟ್ ಮೇಲೆ ಕುತೂಹಲ ಹೆಚ್ಚಾಗಿದೆ.
ರಾಜ್ಯಕ್ಕೆ ಈ ಬಾರಿ ರೈಲ್ವೇ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನಗಳ ನಿರೀಕ್ಷೆಯಿದೆ. ಕರಾವಳಿ ಮಂಗಳೂರಿನಲ್ಲಿ ರೈಲ್ವೇ ವಿಭಾಗದ ಸೃಷ್ಟಿ, ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಲು ಉಪನಗರ ರೈಲು ಯೋಜನೆಗೆ ಅನುದಾನ, ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ ಇತ್ಯಾದಿ ನಿರೀಕ್ಷೆಗಳಿವೆ.
ಇನ್ನು, ಕರ್ನಾಟಕದ ಉತ್ತರ ಭಾಗಗಳಾದ ಗಿಣಿಗೆರ-ಗಂಗಾವತಿ-ರಾಯಚೂರು, ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು-ಮಧುಗಿರಿ-ರಾಯದುರ್ಗ, ದಾವಣಗೆರೆ-ಬೆಳಗಾವಿ, ಗದಗ-ವಾಡಿಯ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ನಿರೀಕ್ಷಿಸಲಾಗಿದೆ. ಇದಲ್ಲದೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ, ಮೇಕೆದಾಟು, ಕಳಸಾ, ಎತ್ತಿನ ಹೊಳೆ ಯೋಜನೆಗೆ ಸಹಾಯ, ರಾಯಚೂರಿನಲ್ಲಿ ಏಮ್ಸ್ ನಿರ್ಮಾಣಕ್ಕೆ ಅನುದಾನ ನಿರೀಕ್ಷಿಸಲಾಗಿದೆ.
ಇನ್ನು, ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಆದಾಯ ತೆರಿಗೆ ವಿನಾಯ್ತಿ 3 ಲಕ್ಷದಿಂದ 5 ಲಕ್ಷಕ್ಕೆ ಏಋಇಕೆಯಾಗುವ ನಿರೀಕ್ಷೆಯಿದೆ. ಗೃಹ ನಿರ್ಮಾಣ ಕ್ಷೇತ್ರಕ್ಕೆ ಪ್ರೋತ್ಸಾಹ, ಸಿರಿಧಾನ್ಯಗಳಿಗೆ ಪ್ರೋತ್ಸಾಹ, ಮೂಲ ಸೌಕರ್ಯಾಭಿವೃದ್ಧಿ, ನವೀಕೃತ ಇಂಧನ ಕ್ಷೇತ್ರಗಳಿಗೆ ಪ್ರೋತ್ಸಾಹ ಸಿಗುವ ಯೋಜನೆಗಳನ್ನು ನಿರೀಕ್ಷಿಸಲಾಗಿದೆ.