Publish Date: Fri, 11 Dec 2020 (07:16 IST)
Updated Date: Fri, 11 Dec 2020 (07:18 IST)
ಡುಮ್ಕಾ : ಜಾರ್ಖಂಡ್ ನ ಆದಿವಾಸಿ ಮಹಿಳೆಯೊಬ್ಬಳು ಪೊಲೀಸರನ್ನು ಸಂಪರ್ಕಿಸಿ 17 ಪುರುಷರಿಂದ ಅತ್ಯಾಚಾರಕ್ಕೊಳಗಾದ ಬಗ್ಗೆ ಆರೋಪಿಸಿ ದೂರು ನೀಡಿದ್ದು, ಮಹಿಳೆಯ ಹೇಳಿಕೆ ಅಸಮಂಜಸವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತನ್ನ ಪತಿಯ ಜೊತೆ ಮಾರುಕಟ್ಟೆಯಿಂದ ಮರಳುತ್ತಿದ್ದಾಗ ಪತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ ಮೇಲೆ 17 ಪುರುಷರು ಸಾಮೂಹಿಕ ಮಾನಭಂಗ ಎಸಗಿದ್ದಾರೆ ಎಂದು ಮಹಿಳೆ ಹೇಳಿದ್ದಳು. ಆದರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆ ಭತ್ತ ಕೊಯ್ಲಿಗೆ ಸಹಾಯ ಮಾಡಲು ಪತಿ ಮತ್ತು ಮಕ್ಕಳ ಜೊತೆ ತನ್ನ ಹೆತ್ತವರ ಮನೆಗೆ ಬಂದಿದ್ದಳು ಎಂಬುದಾಗಿ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಮಹಿಳೆ ನಿರಂತರವಾಗಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದ ಕಾರಣ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎನ್ನಲಾಗಿದೆ. ಹಾಗೇ ಮಹಿಳೆಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.