Webdunia - Bharat's app for daily news and videos

Install App

ವಿಶ್ವದ ಅತಿ ಕಿರಿಯ ವಯಸ್ಸಿನ ಬೋಯಿಂಗ್ 777 ಕಮಾಂಡರ್ ಆದ ಆ್ಯನಿ

Webdunia
ಭಾನುವಾರ, 9 ಜುಲೈ 2017 (15:08 IST)
ಹೈದ್ರಾಬಾದ್:ದೈತ್ಯ ಬೋಯಿಂಗ್ 777 ವಿಮಾನದ ಕಮಾಂಡರ್ ಆಗುವ ಮೂಲಕ ಭಾರತೀಯ ಮೂಲದ ಆ್ಯನಿ ದಿವ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ದೇಶದ ಕೀರ್ತಿ ಮೆರೆದಿದ್ದಾರೆ. ತಮ್ಮ 30ನೇ ವಯಸ್ಸಿನಲ್ಲಿ ದಿವ್ಯಾ ಪೈಲಟ್ ಆಗಿದ್ದು, ಬೋಯಿಂಗ್ 777 ವಿಮಾನದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
 
ಆ್ಯನಿ ದಿವ್ಯಾ ಜನಿಸಿದ್ದು ಪಂಜಾಬ್ ಪಠಾಣ್ ಕೋಟ್ ನಲ್ಲಿ. ಅವರ ತಂದೆ ನಿವೃತ್ತ ಸೈನಿಕರಾಗಿದ್ದು, ಅವರು ಸೇನೆಯಿಂದ ನಿವೃತ್ತರಾದ ಬಳಿಕ ಅವರ ಕುಟುಂಬ ಆಂಧ್ರ ಪ್ರದೇಶದ ವಿಜಯವಾಡಕ್ಕೆ ಸ್ಥಳಾಂತರವಾಗಿತ್ತು. ಆಗಿನ್ನೂ ದಿವ್ಯಾ ಚಿಕ್ಕವಳು. ಚಿಕ್ಕವಯಸ್ಸಿನಿಂದಲೇ ಆಂಧ್ರ ಪ್ರದೇಶದಲ್ಲಿ ಬೆಳೆದ ದಿವ್ಯಾಗೆ ಪೈಲಟ್ ಆಗಬೇಕು ಎಂಬ ಮಹದಾಸೆ ಇತ್ತಂತೆ.  ಅದೇ ನಿಟ್ಟಿನಲ್ಲಿ ಅಭ್ಯಾಸ ಮಾಡಿದ ದಿವ್ಯಾ ಕೊನೆಗೂ ಪೈಲಟ್ ಆಗುವ ಮೂಲಕ ಕನಸನ್ನು ನನಸಾಗಿಸಿಕೊಂಡಿದ್ದಾರೆ.
 
ಮಧ್ಯಮವರ್ಗದ ಕುಟುಂಬದಿಂದ ಯುವತಿ ಹಲವಾರು ಏಳುಬೀಳುಗಳನ್ನು ಎದುರಿಸಿ ಇಂದು ಬೋಯಿಂಗ್ ವಿಮಾನದ ಕಮಾಂಡರ್ ಆಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಕೀರ್ತಿತಂದಿದ್ದಾರೆ. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments