ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕುರಿತಂತೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಜಿಎಸ್ ಟಿ ದರ ತೋರಿಸುವ ಜಿಎಸ್ ಟಿ ಆ್ಯಪ್ ಬಿಡುಗಡೆ ಮಾಡಿದೆ.
ಜಿಎಸ್ ಟಿಯಿಂದ ಸಾಮಗ್ರಿಗಳಲ್ಲಿ ಆದ ದರಗಳ ಬದಲಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿಯಲ್ಲಿ ಮೊಬೈಲ್ ಆ್ಯಪ್ ನ್ನು ಬಿಡುಗಡೆಗೊಳಿಸಿದರು. ಇದರಿಂದ ಬೆರಳ ತುದಿಯಲ್ಲೇ ಜಿಎಸ್ಟಿ ಬಗೆಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಳ್ಳಬಹುದಾಗಿದೆ.
ಈ ಆ್ಯಪ್ ನ ವಿಶೇಷತೆ ಎಂದರೆ ಒಂದು ಬಾರಿ ಡೌನ್ಲೋಡ್ಮಾಡಿದ ಬಳಿಕ ಈ ಆ್ಯಪ್ ಅನ್ನು ಆಫ್ಲೈನ್ಇದ್ದರೂ ಕೂಡಾ ಬಳಸಬಹುದಾಗಿದ್ದು, ಗೂಗಲ್ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಸಿಗಲಿದೆ.
GST rate finder ಎಂಬ ಹೆಸರನ್ನೇ ಹೊಂದಿರುವ ಈ ಅಪ್ಲಿಕೇಶನ್ ನಿಂದಾಗಿ ಜನರಿಗೆ ತಾವುಕೊಳ್ಳಲಿರುವ ಸರಕು ಅಥವಾ ಸಾಮಗ್ರಿಗಳ ಬೆಲೆಯ ಹಿಂದಿನ ಹಾಗೂ ಈಗಿರುವ ಬೆಲೆಯ ವ್ಯತ್ಯಾಸಗಳನ್ನು ತಿಳಿಯಲು ಅನುಕೂಲವಾಗಲಿದೆ.