ದಾರಿಗಡ್ಡ ಬಂದ ಸೈಕಲ್ ಸವಾರನನ್ನು ಉಳಿಸಲು ಹೋದ ಪರಿಣಾಮ ಬಸ್ ಕಂದಕಕ್ಕೆ ಉರುಳಿ 32ಕ್ಕೂ ಹೆಚ್ಚು ಜನರು ಮೃತ ಪಟ್ಟ ದಾರುಣ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ.
ಮಧುಬನಿಯಿಂದ ಸಿತಾಮರಿಗೆ ಹೋಗುತ್ತಿದ್ದ ಬಸ್ ಬೆನಿಪಟ್ಟಿ ಬಳಿಯ ಜಾರ್ಜ್‌ನಲ್ಲಿ ಕಂದಕಕ್ಕೆ ಉರುಳಿದೆ. ಇಲ್ಲಿಯವರೆಗೆ 32 ಶವಗಳನ್ನು ಎತ್ತಲಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಬಸ್‌ನಲ್ಲಿ ಒಟ್ಟು 50ರಿಂದ 65 ಜನ ಪ್ರಯಾಣಿಸುತ್ತಿದ್ದರು.
ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತ ಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ತಲಾ ನಾಲ್ಕು ಲಕ್ಷ ಪರಿಹಾರ ಘೋಷಿಸಿದೆ.
ಘಟನೆ ಬಗ್ಗೆ ಪ್ರಧಾನಿ ಮೋದಿ ಕೂಡ ಟ್ವೀಟ್ ಮೂಲಕ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ ಎಂದು ಸ್ಥಳೀಯರು ರಸ್ತೆ ತಡೆದು ಧರಣಿ ನಡೆಸಿದರು. ಪೊಲೀಸರ ಮೇಲೆ ಕೂಡ ದಾಳಿ ಮಾಡಿದ ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ