ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸಿಗೆ ಗ್ರೀನ್ ಸಿಗ್ನಲ್ ನೀಡಿದೆ. ಆಯೋಗದ ಶಿಫಾರಸಿಗೆ ಕೇಂದ್ರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ 50 ಲಕ್ಷ ಉದ್ಯೋಗಿಗಳ ಭತ್ಯೆಯಲ್ಲಿ ಹೆಚ್ಚಳವಾಗಲಿದೆ.
ಕೇಂದ್ರ ಸರಕಾರಿ ನೌಕರರು ಜುಲೈ 1 ರಿಂದಲೇ ಪರಿಷ್ಕ್ರತ ಭತ್ಯೆ ಪಡೆಯಲಿದ್ದಾರೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಎಚ್‌ಆರ್‌ಎ(ಮನೆ ಬಾಡಿಗೆ ಭತ್ಯೆ) ಸಹಿತ ಪರಿಷ್ಕೃತ ಭತ್ಯೆ ನೀಡಲಿದೆ.
7ನೇ ವೇತನ ಆಯೋಗವು ಮೂರು ಶ್ರೇಣಿಗಳ ವರ್ಗದ ನಗರಗಳಿಗೆ ಅನ್ವಯಿಸುವಂತೆ ಕ್ರಮವಾಗಿ ಶೇ. 24, ಶೇ. 16 ಮತ್ತು ಶೇ. 8ರ ಎಚ್‌ಆರ್‌ಎ ಶಿಫಾರಸು ಮಾಡಿತ್ತು. ಶೇ. 50 ಡಿಎ ದಾಟಿದ ಸಂದರ್ಭಗಳಲ್ಲಿ ನಗರ ವರ್ಗಗಳಿಗೆ ಅನುಕ್ರಮವಾಗಿ ಎಚ್‌ಆರ್‌ಎ ಯನ್ನು ಶೇ. 27, ಶೇ. 18 ಮತ್ತು ಶೇ. 9ರ ಮಟ್ಟದಲ್ಲಿ ಏರಿಸುವಂತೆ ವರದಿ ಸಲ್ಲಿಕೆ ಮಾಡಿತ್ತು.
ದೇಶ ಕಾಯುತ್ತಿರುವ ಸೈನಿಕರ ವೇತನದಲ್ಲೂ 14 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ಏರಿಕೆಯಾಗಲಿದೆ. ಸೇನೆಯ ಅಧಿಕಾರಿಗಳ ವೇತನದಲ್ಲಿ 21 ಸಾವಿರ ರೂಪಾಯಿಗಳಿಂದ 43 ಸಾವಿರ ರೂಪಾಯಿಗಳವರೆಗೆ ಹೆಚ್ಚಳವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.