ಗೋಸಂರಕ್ಷಣೆಯ ನೆಪದಲ್ಲಿ ಅಮಾಯಕ ಮುಸ್ಲಿಮರು ಮತ್ತು ದಲಿತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಖ್ಯಾತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಟೌನ್‌ಹಾಲ್ ಬಳಿ ನಾಟ್ ಇನ್ ಮೈ ನೇಮ್ ಎನ್ನುವ ಹೆಸರಿನಡಿ ಭಾರಿ ಕ್ಯಾಂಪೇನ್ ಅಡಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು. ನನ್ನ ಹೆಸರಲ್ಲಿ ಏಕೆ ಕೊಲ್ಲೋದನ್ನು ನಿಲ್ಲಿಸಿ ಎನ್ನುವ ಘೋಷಣೆಗಳನ್ನು ಕೂಗಲಾಯಿತು.
ಧರ್ಮದ ಹೆಸರಲ್ಲಿ ಕೊಲೆ, ರಾಜಕಾರಣ ಮಾಡಲಾಗುತ್ತಿದೆ. ಗೋಹತ್ಯೆ ತಡೆಯುವ ನೆಪದಲ್ಲಿ ಇತರ ಸಮುದಾಯಗಳ ಮೇಲೆ ನಿರಂತರವಾಗಿ ಹಲ್ಲೆಗಳಾಗುತ್ತಿವೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಭಾರತ ದೇಶ ಹಿಂದು, ಸಿಖ್, ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಸೇರಿದಂತೆ ಎಲ್ಲಾ ಧರ್ಮಯರಿಗೆ ಸೇರಿದ್ದಾಗಿದೆ ಎಂದು ಸಾಹಿತಿ ಗಿರೀಶ್ ಕಾರ್ನಾಡ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.