ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಹುಜನ ಸಮಾಜವಾದಿ ಪಕ್ಷ ಶುಕ್ರವಾರ ಎರಡನೆಯ ಹಂತದಲ್ಲಿ 100 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎರಡನೆಯ ಪಟ್ಟಿಯಲ್ಲಿ ಬಿಎಸ್‍ಪಿ 27 ಟಿಕೆಟ್‌ಗಳನ್ನು ಪರಿಶಿಷ್ಟ ಜಾತಿಯವರಿಗೆ ನೀಡಲಾಗಿದೆ.
ಗುರುವಾರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಎಸ್‌ಪಿ, ಅದರ ಮರುದಿನವೇ ಎರಡನೆಯ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
ಮುಸ್ಲಿಂ ಸಮುದಾಯದವರಿಗೆ 36 ಟಿಕೆಟ್ ನೀಡಲಾಗಿದ್ದು ಅದರಲ್ಲಿ, ಮುಝಪ್ಪರ್ ನಗರ ಗಲಭೆಯ ಆರೋಪಿ ಮತ್ತು ಚರ್ತವಾಲ್ ಕ್ಷೇತ್ರದ ಶಾಸಕ ನೂರ್ ಸಲೀಮ್ ಹೆಸರು ಕೂಡ ಸೇರಿದೆ.
ತಮ್ಮ ಪಕ್ಷ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಏಕಾಂಗಿಯಾಗಿಯೇ ಕಣಕ್ಕಿಳಿಯಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ