Publish Date: Tue, 18 Sep 2018 (07:10 IST)
Updated Date: Tue, 18 Sep 2018 (07:18 IST)
ಮಹಾರಾಷ್ಟ್ರ : ವೇದ ಪಾಠಶಾಲೆಯಲ್ಲಿ ಕಲಿಯುತ್ತಿದ್ದ ಬಾಲಕರಿಬ್ಬರು ತನ್ನ ಸಹಪಾಠಿ ಬಾಲಕರ ಜನನಾಂಗಗಳಿಗೆ ನೂಲು ಸುತ್ತಿ ರಾಗಿಂಗ್ ಮಾಡಿರುವ ಘಟನೆ ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ನಡೆದಿದೆ.
ಈ ವಿಚಾರವನ್ನು ಸಂತ್ರಸ್ತ ಬಾಲಕರು ವೇದಪಾಠಶಾಲೆಯ ನಿರ್ದೇಶಕರ ಗಮನಕ್ಕೆ ತಂದಿದ್ದರೂ ಕೂಡ ಆ ಬಗ್ಗೆ ಅವರು ನಿರ್ಲಕ್ಷಿಸಿದ್ದಾರೆ. ನಂತರ ಬಾಲಕರು ಈ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದಾಗ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 307 ಮತ್ತು 326 ಅನ್ವಯ ದೂರು ದಾಖಲಿಸಿಕೊಂಡ ಪೊಲೀಸರು ವೇದಪಾಠಶಾಲೆಯ ನಿರ್ದೇಶಕ ಸುಧೀರ್ ಕುಲಕರ್ಣಿ(42) ಅವರನ್ನು ಬಂಧಿಸಿದ್ದು, 10 ಮತ್ತು 13 ವರ್ಷದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.