Publish Date: Sun, 25 Apr 2021 (07:06 IST)
Updated Date: Sun, 25 Apr 2021 (07:09 IST)
ಶಹಜಹಾನ್ಪುರ : ಅಪ್ರಾಪ್ತ ಹುಡುಗಿಯ ಮೇಲೆ ಮಾನಭಂಗ ಎಸಗಿದ ಆರೋಪದ ಮೇಲೆ ಪೊಲೀಸರು 15 ವರ್ಷದ ಹುಡುಗನನ್ನು ಬಂಧಿಸಿದ್ದಾರೆ.
ಸಂತ್ರಸ್ತೆ ಕಟ್ಟಿಗೆ ತರಲು ಹೋಗುತ್ತಿದ್ದಾಗ ಹುಡುಗ ಆಕೆಯನ್ನು ಚರಂಡಿಯ ಬಳಿ ಎಳೆದೊಯ್ದು ಮಾನಭಂಗ ಎಸಗಿದ್ದಾನೆ. ಹುಡುಗಿ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ.
ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಹುಡುಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.