ನವದೆಹಲಿ: ಬಲವಂತವಾಗಿ ಪೊಲೀಯೋ ಡ್ರಾಪ್ ಲಸಿಕೆ ಹಾಕಿಸಿಕೊಂಡ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಲುಥಿಯಾನಾದಲ್ಲಿ ನಡೆದಿದೆ. ಒಂದೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಪೊಲೀಯೋ ಲಸಿಕೆ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಲಸಿಕೆ ಹಾಕುತ್ತಾರೆ. ಹೀಗೆ ಲಸಿಕೆ ಹಾಕಿಸಿಕೊಂಡ ಅರ್ಧಗಂಟೆಯೊಳಗೆ ಬಾಲಕ ಮೃತಪಟ್ಟಿದ್ದಾನೆಂದು ಕುಟುಂಬದವರು ಆರೋಪಿಸಿದ್ದಾರೆ. ನಿದ್ರೆ ಮಾಡುತ್ತಿದ್ದ ಬಾಲಕನನ್ನು ಎಬ್ಬಿಸಿ ಆಶಾ ಕಾರ್ಯಕರ್ತೆಯರು ಲಸಿಕೆ ಹಾಕಿಸಿದ್ದರು ಎನ್ನಲಾಗಿದೆ.
ಲಸಿಕೆ ಹಾಕಿದ ಅರ್ಧಗಂಟೆಯಲ್ಲಿ ಮಗು ವಿಲಕ್ಷಣವಾಗಿ ವರ್ತಿಸಲು ಆರಂಭಿಸಿತು. ನಂತರ ಪ್ರಜ್ಞಾಹೀನವಾಯಿತು. ತಕ್ಷಣ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನಿದ್ರೆ ಮಾಡುತ್ತಿದ್ದ ಕಾರಣ ಲಸಿಕೆ ಹಾಕಬೇಡಿ ಎಂದರೂ ಕೇಳದೇ ಆಶಾ ಕಾರ್ಯಕರ್ತೆಯರು ಬಲವಂತವಾಗಿ ಲಸಿಕೆ ಹಾಕಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದೀಗ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.