ನಾಗ್ಪುರ: ತಂದೆ ಶಾಲೆಗೆ ಬೇಕಾದ ಪುಸ್ತಕ, ಬ್ಯಾಗ್ ತಂದುಕೊಡಲಿಲ್ಲವೆಂದು ಏಳನೇ ತರಗತಿ ಓದುತ್ತಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗ್ಪುರದಲ್ಲಿ ನಡೆದಿದೆ.
ತಂದೆಗೆ ಬಡತನವಿತ್ತು. ಹಾಗಿದ್ದಾಗಿಯೂ ಎರಡು ದಿನಗಳೊಳಗೆ ಆತ ಹೇಳಿದ ವಸ್ತುಗಳನ್ನು ತಂದುಕೊಡುವುದಾಗಿ ಭರವಸೆ ನೀಡಿದ್ದರು. ಹಾಗಿದ್ದರೂ ಬಾಲಕ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.
ಶಾಲೆಯ ಆಡಳಿತ ಮಂಡಳಿ ಬೇಸಿಗೆ ರಜೆಯಲ್ಲೇ ಪುಸ್ತಕಗಳನ್ನು ಖರೀದಿಸುವಂತೆ ಒತ್ತಡ ಹೇರುತ್ತಿತ್ತು ಎನ್ನಲಾಗಿದೆ. ಆದರೆ ಶಾಲೆಯ ಶಿಕ್ಷಕರು ಇದನ್ನು ನಿರಾಕರಿಸಿದ್ದಾರೆ. ನಾವು ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಹಣ ಒಟ್ಟುಗೂಡಿಸಿ ನೆರವಾಗುತ್ತೇವೆ. ಅದರಲ್ಲೂ ಈ ಬಾಲಕ ಕಲಿಯುವುದರಲ್ಲಿ ಮುಂದಿದ್ದ. ಹಾಗಿರುವಾಗ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ