ನವದೆಹಲಿ: ದೇಶದಲ್ಲೆಡೆ ಹಾರಾಟ ನಡೆಸುವ ಏರ್ ಇಂಡಿಯಾ ವಿಮಾನದ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಇನ್ನು ವಿಮಾನದೊಳಗೆ ಸಸ್ಯಾಹಾರ ಊಟ ಮಾತ್ರ ಲಭ್ಯವಿರಲಿದೆ.
‘ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಮಾಂಸಾಹಾರ ಊಟ ನೀಡದೇ ಇರಲು ಏರ್ ಇಂಡಿಯಾ ತೀರ್ಮಾನಿಸಿದೆ’ ಎಂದು ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದ ಕಸ ವಿಲೇವಾರಿ ಕಷ್ಟ ಕಡಿಮೆ ಮಾಡುವುದು ಮತ್ತು ವೆಚ್ಚ ಕಡಿಮೆ ಮಾಡಿದಂತಾಗುತ್ತದೆ ಎನ್ನುವುದು ಸಂಸ್ಥೆಯ ಲೆಕ್ಕಾಚಾರ.
2016 ರಲ್ಲಿ 90 ನಿಮಿಷಗಳ ಕಿರು ಅವಧಿ ಪ್ರಯಾಣ ಮಾಡುವವರಿಗೆ ಮಾಂಸಾಹಾರವಿಲ್ಲ ಎಂಬ ನಿಯಮ ಜಾರಿಗೆ ತಂದಿತ್ತು. ಇದೀಗ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಮಾಡುವ ಎಲ್ಲರಿಗೂ ಮಾಂಸಾಹಾರವಿಲ್ಲ ಎಂಬ ನಿಯಮ ಜಾರಿಗೆ ತಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ