ನವದೆಹಲಿ: ಅವಿಶ್ವಾಸ ಗೊತ್ತುವಳಿ ಸಂದರ್ಭ ಪ್ರಧಾನಿ ಮೋದಿ ತೆಲಂಗಾಣದ ಸಿಎಂ ಚಂದ್ರಶೇಖರ್ ರಾವ್ ಅವರನ್ನು ಹೊಗಳಿದಾಗಲೇ ಇವರಿಬ್ಬರ ನಡುವಿನ ಮೈತ್ರಿ ಬಗ್ಗೆ ಅನುಮಾನಗಳು ಮೂಡಿತ್ತು. ಅದೀಗ ಪಕ್ಕಾ ಆಗಿದೆ.
ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು, ಚುನಾವಣೆ ನಂತರ ಬಿಜೆಪಿ ಜತೆಗೆ ಸಖ್ಯಕ್ಕೆ ಟಿಆರ್ ಎಸ್ ಮುಕ್ತವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಆ ಮೂಲಕ ಆಂಧ್ರಪ್ರದೇಶದಲ್ಲಿ ಟಿಡಿಪಿಯಲ್ಲಿ ಕಳೆದುಕೊಂಡಿದ್ದ ಸ್ನೇಹವನ್ನು ಟಿಆರ್ ಎಸ್ ನಲ್ಲಿ ಬಿಜೆಪಿ ಪಡೆದುಕೊಂಡಿದೆ. ಇದು ಆಂಧ್ರ ಭಾಗದಲ್ಲಿ 2019 ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಬಹುದೊಡ್ಡ ಲಾಭವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.