ನವದೆಹಲಿ: ಹಿರಿಯ ರಾಜಕಾರಣಿ ಅಮರ್ ಸಿಂಗ್ ಜತೆಗೆ ಬಾಂಧವ್ಯ ಬೆಸೆಯಲು ಮುಂದಾಗಿರುವ ಪ್ರಧಾನಿ ಮೋದಿಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಸಲಹೆಯೊಂದನ್ನು ಕೊಟ್ಟಿದ್ದಾರೆ.
ಅಮರ್ ಸಿಂಗ್ ರನ್ನು ದಯವಿಟ್ಟು ನಿಮ್ಮ ಬೆಡ್ ರೂಂ ಒಳಗೆ ಬಿಟ್ಟುಕೊಳ್ಳಬೇಡಿ ಎಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಅಜಂ ಖಾನ್ ಸಲಹೆ ಕೊಟ್ಟಿದ್ದಾರೆ.
‘ಪ್ರಧಾನಿ ಮೋದಿಗೆ ನನ್ನದೊಂದು ವಿನಮ್ರ ಸಲಹೆ. ಇನ್ನೊಬ್ಬರ ಬೆಡ್ ರೂಂ, ಬಾತ್ ರೂಂನಲ್ಲಿ ಎಷ್ಟು ಖುರ್ಚಿಗಳಿವೆ ಎಂದು ಲೆಕ್ಕ ಹಾಕಿದ ಇತಿಹಾಸವಿರುವ ವ್ಯಕ್ತಿಯನ್ನು ನಿಮ್ಮ ಬೆಡ್ ರೂಂ ಒಳಗೆ ಬಿಟ್ಟುಕೊಳ್ಳಬೇಡಿ. ಹುಷಾರು ನಿಮ್ಮ ಬೆಡ್ ರೂಂನಲ್ಲಿ ಎಷ್ಟು ಬೆಡ್ ಶೀಟ್ ಇದೆ ಎಂದೂ ಅವರು ಲೆಕ್ಕಾಚಾರ ಹಾಕಬಹುದು’ ಎಂದು ಅಜಂ ಖಾನ್ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.