Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿಯಿಂದ ಕಪ್ಪು ಹಣ ವಿರೋಧಿ ದಿನಾಚರಣೆ: ಅರುಣ್ ಜೇಟ್ಲಿ

ಬಿಜೆಪಿಯಿಂದ ಕಪ್ಪು ಹಣ ವಿರೋಧಿ ದಿನಾಚರಣೆ: ಅರುಣ್ ಜೇಟ್ಲಿ
ನವದೆಹಲಿ , ಬುಧವಾರ, 25 ಅಕ್ಟೋಬರ್ 2017 (20:49 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟು ನಿಷೇಧ ಘೋಷಿಸಿ ನವೆಂಬರ್ 8 ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಟಾಂಗ್ ನೀಡಲು ಕಪ್ಪು ಹಣ ವಿರೋಧಿ ದಿನಾಚರಣೆ ಆಚರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ನೋಟು ನಿಷೇಧವನ್ನು ಕಪ್ಪು ದಿನವನ್ನಾಗಿ ಆಚರಿಸುವುದಾಗಿ 18 ವಿಪಕ್ಷಗಳು ಜಂಟಿ ಹೇಳಿಕೆ ನೀಡಿರುವುದೇ ಬಿಜೆಪಿ, ಕಪ್ಪು ಹಣ ವಿರೋಧಿ ದಿನಾಚರಣೆ ಆಚರಣೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
 
ಯುಪಿಎ ಸರಕಾರ ಹಲವು ವರ್ಷಗಳ ಕಾಲ ಅಧಿಕಾರ ನಡೆಸಿದ್ದರೂ ಕಪ್ಪು ಹಣದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವಿತ್ತ ಖಾತೆ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
 
ಕೇಂದ್ರ ಸರಕಾರದ ದೋಷಪೂರಿತ ಆರ್ಥಿಕ ನೀತಿಗಳ ವಿರುದ್ಧ ವಿಪಕ್ಷಗಳು ಜಂಟಿಯಾಗಿ ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಲಿವೆ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದ ರಸ್ತೆಗಳಿಗಿಂತ ಮಧ್ಯಪ್ರದೇಶ ರಸ್ತೆಗಳು ಉತ್ತಮ: ಶಿವರಾಜ್ ಸಿಂಗ್ ಚೌಹಾನ್