Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿ ಅಭ್ಯರ್ಥಿಗೆ ಚಪ್ಪಲಿಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಮತದಾರರು

ಬಿಜೆಪಿ ಅಭ್ಯರ್ಥಿಗೆ ಚಪ್ಪಲಿಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಮತದಾರರು
ಬೆಂಗಳೂರು , ಸೋಮವಾರ, 8 ಜನವರಿ 2018 (16:02 IST)
ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬನಿಗೆ ಮತದಾರರು ಚಪ್ಪಲಿಯ ಹಾರ ಹಾಕಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 272 ಕಿ.ಮೀ ದೂರದಲ್ಲಿರುವ ಧಾರ್ ಜಿಲ್ಲೆಯ ದಾಮ್ನೋಡ್ ಪಟ್ಟಣದಲ್ಲಿ ನಡೆದಿದೆ. 
ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಚುನಾವಣೆ ನಿಮಿತ್ಯ ಮನೆ ಮನೆಗೆ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕ್ರೋಶಗೊಂಡಿದ್ದ ಮತದಾರರು ಅವರಿಗೆ ಚಪ್ಪಲಿ ಹಾರ ತೋಡಿಸಿ ಸನ್ಮಾನಿಸಿದ್ದಾರೆ. 
 
ಮತದಾರರಿಗೆ ನನ್ನಿಂದ ಅಸಮಾಧಾನವಾಗಿರಬಹುದು. ಆದ್ದರಿಂದ ಇಂತಹ ವರ್ತನೆ ತೋರಿದ್ದಾರೆ. ನಾವು ಒಂದು ಕಡೆ ಕುಳಿತು ಚರ್ಚೆ ನಡೆಸುತ್ತೇವೆ. ನಾನು ಅವರಿಗೆ ಮಗನಿದ್ದಂತೆ ಎಂದು ಶರ್ಮಾ ತಿಳಿಸಿದ್ದಾರೆ.
 
ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾಗೆ ಆರಂಭದಲ್ಲಿ ಆಘಾತವಾದರೂ ನಂತರ ಚಪ್ಪಲಿ ಹಾರ ಹಾಕಿಕೊಂಡರು. ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸದಿರುವುದಕ್ಕೆ ಬೆಳಕು ಚೆಲ್ಲಲು ಚಪ್ಪಲಿ ಹಾರ ಹಾಕಿದ್ದಾಗಿ ನತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನೀರಿನ ಸಮಸ್ಯೆ ಕುರಿತು ದೂರು ನೀಡಲು ನಾವು ಬಿಜೆಪಿ ಅಭ್ಯರ್ಥಿಯ ಬಳಿಗೆ ತೆರಳಿದ್ದಾಗ, ಅವರು, ನಮ್ಮ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದರು. ಹಲವಾರು ಬಾರಿ ನಮ್ಮನ್ನು ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ನೀಡಲಾಯಿತು. ಆದ್ದರಿಂದ ನಾವು ಹೀಗೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೀವಂತ ವ್ಯಕ್ತಿಯನ್ನು ಶವಗಾರದಲ್ಲಿಟ್ಟು ಯಡವಟ್ಟು ಮಾಡಿದ ಕಿಮ್ಸ್ ವೈದ್ಯರು