ಕಿಮ್ಸ್ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಬದುಕಿದ್ದ ವ್ಯಕ್ತಿಯನ್ನು ಏಳು ಗಂಟೆಗಳ ಕಾಲ ಶವಾಗಾರದಲ್ಲಿ ಇರಿಸಿರುವ ಘಟನೆ ನಡೆದಿದೆ.
ನೇಕಾರ ನಗರ ಬಳಿಯ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾದ ಪ್ರವೀಣ್ ಎಂಬಾತನನ್ನು ರಾತ್ರಿ ಎಂಟಕ್ಕೆ ಕಿಮ್ಸ್ ಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ ಮೂರು ಗಂಟೆಗೆ ಪ್ರವೀಣ್ ಮೃತ ಪಟ್ಟಿದ್ದಾನೆ ಎಂದು ವೈದ್ಯರು ವೈದ್ಯರು ತಿಳಿಸಿದ್ದರಿಂದ ಪ್ರವೀಣನನ್ನು ಶವಾಗಾರಕ್ಕೆ ಸಾಗಿಸಿದ್ದರೆ.
ಬೆಳಗ್ಗೆ ಹತ್ತು ಗಂಟೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಪ್ರವೀಣ್ ಬದುಕಿರುವುದು ತಿಳಿದು ಬಂದಿದೆ. ವಿಷಯ ತಿಳಿದ ಸಂಬಂಧಿಕರು ಪ್ರವೀಣ್ನನ್ನು ಖಾಸಗಿ ಆಸ್ಪತ್ರಗೆ ಸಾಗಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆ ವೈದ್ಯರು ಕೆಲವು ನಿಮಿಷಗಳ ಮುಂಚೆಯೇ ಪ್ರವೀಣ್ ಮೃತಪಟ್ಟಿದ್ದಾನೆ ಎಂದಿದ್ದಾರೆ.
ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶಕೊಂಡ ಮೃತರ ಸಂಬಂಧಿಕರು ಕಿಮ್ಸ್ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.