ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ತನ್ನ ಕಡೆಗೆ ಹೆಚ್ಚು ರಾಜಕೀಯ ಪಕ್ಷಗಳನ್ನು ಸೇರಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ.
ಇತ್ತೀಚೆಗಷ್ಟೇ ಬಿಜೆಪಿಗೆ ಲೋಕಸಭೆ ಚುನಾವಣೆ ನಂತರ ಬೆಂಬಲ ಕೊಡುವುದಾಗಿ ತೆಲಂಗಾಣ ಸಿಎಂ, ಟಿಆರ್ ಎಸ್ ಮುಖಂಡ ಚಂದ್ರಶೇಖರ್ ರಾವ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೊಂದು ಪಕ್ಷದ ಜತೆಗೆ ಬಿಜೆಪಿ ಮೈತ್ರಿ ಗಟ್ಟಿಗೊಳ್ಳುತ್ತಿದೆ.
ಇದೀಗ ರಾಜ್ಯಸಭೆ ಉಪಸಭಾಪತಿ ಸ್ಥಾನದ ಚುನಾವಣೆಯಲ್ಲಿ ಬಿಜು ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ) ಪಕ್ಷ ಎನ್ ಡಿಎ ಕೂಟಕ್ಕೆ ಬೆಂಬಲ ಕೊಡುವ ಮೂಲಕ ಎರಡೂ ಪಕ್ಷಗಳ ನಡುವೆ ಮೈತ್ರಿ ಮತ್ತಷ್ಟು ಗಟ್ಟಿಗೊಳ‍್ಳುವ ಲಕ್ಷಣ ತೋರುತ್ತಿದೆ. ಇದು ಲೋಕಸಭೆ ಚುನಾವಣೆವರೆಗೂ ಮುಂದುವರಿಯುವ ಸೂಚನೆ ದೊರೆತಿದೆ.
ಕಳೆದ ಜೂನ್ ನಲ್ಲಿ ಪ್ರಧಾನಿ ಮೋದಿ ಬಿಜು ಪಟ್ನಾಯಕ್ ಅವರಿಗೆ ಕರೆ ಮಾಡಿ ದೇಶದಾದ್ಯಂತ ನಡೆಯುವ ಉಪ ಚುನಾವಣೆ ಸಂದರ್ಭದಲ್ಲಿ ಬೆಂಬಲ ಕೊಡುವಂತೆ ಕೋರಿದ್ದರು. ಅದಾದ ಬಳಿಕ ಎರಡೂ ಪಕ್ಷಗಳ ನಡುವಿನ ಬಾಂಧವ್ಯ ದಿನೇ ದಿನೇ ಗಟ್ಟಿಯಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.