ನವದೆಹಲಿ: ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಚೀನಾ ನಡುವೆ ಒಪ್ಪಂದ ನಡೆದ ಬಗ್ಗೆ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಹರಿದಾಡುತ್ತಿತ್ತು.
ಅದರ ಬಗ್ಗೆ ಇದೀಗ ಬಿಜೆಪಿ ಟೀಕೆ ಮಾಡಿದ್ದು, ಯುಪಿಎ ಅವಧಿಯಲ್ಲಿ ರಾಜೀವ್ ಗಾಂಧಿ ಫೌಂಡೇಷನ್ ಗೆ ಭಾರೀ ಮೊತ್ತದ ದೇಣಿಗೆ ಹರಿದುಬಂದಿದೆ ಎಂದು ಆರೋಪ ಮಾಡಿದೆ.
ಈ ಬಗ್ಗೆ ಆಂಗ್ಲ ಮಾಧ್ಯಮವೊಂದೂ ವರದಿ ಮಾಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಈ ವಿಚಾರಕ್ಕೆ ಕೆಸರೆರಚಾಟ ನಡೆದಿದೆ.