ನವದೆಹಲಿ: ಗಣರಾಜ್ಯೋತ್ಸವದಂದು ನಡೆಯುವ ಸ್ತಬ್ಧ ಚಿತ್ರಗಳ ಪ್ರದರ್ಶನ ಎಲ್ಲಾ ರಾಜ್ಯಗಳಿಗೆ ಪ್ರತಿಷ್ಠೆಯ ವಿಚಾರ. ಆದರೆ ಕೇಂದ್ರ ಆಯ್ಕೆ ಸಮಿತಿ ಕೆಲವು ರಾಜ್ಯಗಳ ಸ್ತಬ್ಧ ಚಿತ್ರಗಳಿಗೆ ಅವಕಾಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗುವ ಸಾಧ‍್ಯತೆಯಿದೆ.
ಒಟ್ಟು 56 ಸ್ತಬ್ಧ ಚಿತ್ರಗಳ ಪೈಕಿ 22 ಸ್ತಬ್ಧ ಚಿತ್ರಗಳನ್ನು ಮಾತ್ರ ಆಯ್ಕೆ ಸಮಿತಿ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ. ಈ ಪೈಕಿ ಪಶ್ಚಿಮ ಬಂಗಾಲದ ಸ್ತಬ್ಧ ಚಿತ್ರ ನಿರಾಕರಣೆಯಾಗಿತ್ತು. ಇದು ಮತ್ತೆ ಮಮತಾ ಸರ್ಕಾರ ಕೇಂದ್ರದ ವಿರುದ್ಧ ಸಿಡಿದೇಳುವಂತೆ ಮಾಡಿದೆ.
ಇದೀಗ ಬಂಗಾಲದ ಬಳಿಕ ಬಿಹಾರದ ಸ್ತಬ್ಧ ಚಿತ್ರವನ್ನೂ ತಿರಸ್ಕರಿಸಲಾಗಿದೆ. ಇದು ಮತ್ತೆ ಸಿಎಂ ನಿತೀಶ್ ಕುಮಾರ್ ಮತ್ತು ಕೇಂದ್ರದ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ನಿಗದಿತ ಮಾನದಂಡಗಳನ್ನು ಪೂರ್ತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಸ್ತಬ್ಧ ಚಿತ್ರವನ್ನು ತಿರಸ್ಕರಿಸಲಾಗಿದೆಯಾದರೂ, ಕೇಂದ್ರ ಬೇಕೆಂದೇ ತನ್ನ ವಿರೋಧಿ ಪಕ್ಷಗಳು, ನಾಯಕರ ಸರ್ಕಾರಗಳಿರುವ ರಾಜ್ಯಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸುತ್ತಿದೆ ಎಂದು ಈ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಯಿದೆ.