Publish Date: Sat, 04 May 2019 (09:49 IST)
Updated Date: Sat, 04 May 2019 (09:53 IST)
ನವದೆಹಲಿ : ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅನಿಲ್ ಬಾಜ್ಪೈ ಶುಕ್ರವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ಮುಖಂಡರು, ಹೇಗಾದರೂ ಮಾಡಿ ಅಧಿಕಾರಕ್ಕೇರುವ ಹಂಬಲಕ್ಕೆ ಬಿಜೆಪಿ 10 ಕೋಟಿ ರೂ. ಆಮಿಷ ಒಡ್ಡಿ ಶಾಸಕರನ್ನು ತನ್ನ ಕಡೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದು, ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಇದೀಗ ಎಎಪಿ ಶಾಸಕ ಅನಿಲ್ ಬಾಜ್ಪೈ ಬಿಜೆಪಿ ಸೇರಿದ್ದಾರೆ.
ಶುಕ್ರವಾರ ಬಿಜೆಪಿಯ ದೆಹಲಿ ಕಚೇರಿಯಲ್ಲಿ ಕೇಂದ್ರ ಸಚಿವ ವಿಜಯ್ ಗೋಯೆಲ್ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ಅನಿಲ್ ಬಿಜೆಪಿ ಸೇರಿದ್ದಾರೆ. ಆದರೆ ಯಾವುದೇ ಲಂಚವನ್ನು ಬಿಜೆಪಿಯಿಂದ ಪಡೆದಿಲ್ಲ. ಕೇಜ್ರಿವಾಲ್ ಗೆ ಸುಳ್ಳು ಹೇಳಿ, ನಂತರ ಕ್ಷಮೆ ಕೇಳುವ ಹವ್ಯಾಸವೇ ಇದೆ ಎಂದು ಅನಿಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.