Publish Date: Sun, 21 Jan 2018 (08:12 IST)
Updated Date: Sun, 21 Jan 2018 (08:25 IST)
ನವದೆಹಲಿ: ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಅರೆಸೇನಾ ಪಡೆ ಯೋಧರ ಕುಟುಂಬಗಳಿಗೆ ನೆರವು ನೀಡುವುದಕ್ಕಾಗಿ ಮೂಲ ನಿಧಿ ಸಂಗ್ರಹಿಸಲು ಆರಂಭಿಸಿದ ‘ಭಾರತ್ ಕೆ ವೀರ್’ ಗೀತೆಯನ್ನು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಈ ಗೀತೆಗೆ ಕೈಲಾಶ್ ಖೇರ್ ಸಂಗೀತ ಸಂಯೋಜಿಸಿದ್ದಾರೆ ಜತೆಗೆ ಸಾಹಿತ್ಯ ರಚಿಸಿ ಮನೋಜ್ಞವಾಗಿ ಹಾಡಿದ್ದಾರೆ. ಈ ಗೀತೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಖಾತೆ ರಾಜ್ಯ ಸಚಿವರಾದ ಕಿರಣ್ ರಿಜಿಜು ಹಾಗೂ ಹಂಸರಾಜ್ ಅಹಿರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೊಬಾಲ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ.
ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ, ಅದರಿಂದ ಬರುವ ಹಣವನ್ನು ಈ ಯೋಜನೆಗೆ ನೀಡಲಾಗುತ್ತದೆ ಎಂದು ಕೈಲಾಶ್ ಖೇರ್ ವಿನಂತಿಸಿಕೊಂಡರು. ಇನ್ನು ಈ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ ಅಕ್ಷಯ್ ಕುಮಾರ್ ಅವರನ್ನು ರಾಜನಾಥ್ ಸಿಂಗ್ ಅವರು ಶ್ಲಾಫಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ