ನವದೆಹಲಿ: ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ 150 ರೂ. ನೀಡುವ ಬಗ್ಗೆ ಭಾರತ್ ಬಯೋಟೆಕ್ ಅಪಸ್ವರವೆತ್ತಿದೆ.
ಈ ಬೆಲೆ ಸ್ಪರ್ಧಾತ್ಮಕವಲ್ಲ ಮತ್ತು ಮುಂದಿನ ದಿನಗಳಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಕೊವ್ಯಾಕ್ಸಿನ್ ತಯಾರಿಕೆ ವೆಚ್ಚ ನೋಡಿದರೆ ಇದು ತೀರಾ ಕಡಿಮೆ ಬೆಲೆ ಎಂದು ಸಂಸ್ಥೆ ಹೇಳಿದೆ.
ಲಸಿಕೆ ತಯಾರಿಕೆ, ಕ್ಲಿನಿಕಲ್ ಪ್ರಯೋಗ ಇತ್ಯಾದಿಗಾಗಿ ಸುಮಾರು 500 ಕೋಟಿ ರೂ.ಗಳಷ್ಟು ತಮ್ಮದೇ ಕೈಯಿಂದ ವೆಚ್ಚ ಭರಿಸಬೇಕಾಗುತ್ತದೆ. ವ್ಯಾಕ್ಸಿನ್ ತಯಾರಿಕೆಯ ವೆಚ್ಚದ ಜೊತೆಗೆ ಅದರ ಸಾಗಣೆ, ಮಾರುಕಟ್ಟೆ ಇತ್ಯಾದಿ ವೆಚ್ಚವೂ ಅವಲಂಬಿತವಾಗಿರುತ್ತದೆ. ಹಾಗಿರುವಾಗ ಇದು ತೀರಾ ಕಡಿಮೆ ಬೆಲೆ ಎಂದು ಭಾರತ್ ಬಯೋಟೆಕ್ ಹೇಳಿದೆ.